Wednesday, May 29, 2024
Homeಸುದ್ದಿಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣ ಕೊರೊನಾ; ಕೇಂದ್ರ ಆರೋಗ್ಯ ಸಚಿವ ಮನ್ಸುಖ್..!

ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣ ಕೊರೊನಾ; ಕೇಂದ್ರ ಆರೋಗ್ಯ ಸಚಿವ ಮನ್ಸುಖ್..!

ಗಾಂಧಿನಗರ,ಅ. 31: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳ ಪ್ರಕರಣ ಜಾಸ್ತಿಯಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಗುಜರಾತ್‌ ನವರಾತ್ರಿ ಸಂದರ್ಭದಲ್ಲಿ ಗರ್ಭಾನೃತ್ಯ ಮಾಡುತ್ತಲೇ 10 ಮಂದಿ ಹೃದಯಾಘಾತವಾಗಿ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿತ್ತು.

ಈ ರೀತಿಯ ಸಾವುಗಳಿಗೆ ಕೊರೊನಾ ಕಾರಣವೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಹೇಳಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿ , ಗಾರ್ಭ ನೃತ್ಯ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಅವರು ಕೊರೊನಾದಿಂದ ಗಂಭೀರವಾಗಿ ತೊಂದರೆಗೀಡಾಗಿದ್ದ ವ್ಯಕ್ತಿಗಳು ಸೋಂಕು ಗುಣಪಟ್ಟ ಬಳಿಕವೂ 1 -2 ವರ್ಷಗಳವರೆಗೆ ಅತಿಯಾದ ವ್ಯಾಯಾಮ ಹಾಗೂ ತೀವ್ರತರದ ಕೆಲಸಗಳನ್ನು ಮಾಡಬಾರದು.

ಇದರಿಂದ ದೂರ ಇದ್ದಷ್ಟು ದಿಡೀರ್‌ ಆಗುವ ಹೃದಯಸ್ತಂಭನದಿಂದ ಪಾರಾಗಬಹುದು ಎಂದು ಹೇಳಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News