ಅಯ್ಯೋ.. ಇದೆಂಥಾ ಅವತಾರ.. ಕೀ ಬೋರ್ಡನ್ನ ಹೆಂಗೆಲ್ಲಾ ಬಳಸಿಕೊಂಡಿದ್ದಾಳೆ ನೋಡಿ ಉರ್ಫಿ!

ಉರ್ಫಿ ಜಾವೇದ್ ಹೆಸರು ಕೇಳಿಬಂದ ತಕ್ಷಣವೇ ಆಕೆಯ ನಾನಾ ಅವರತಾರಗಳು ಕಣ್ಣು ಮುಂದೆ ಬರುತ್ತವೆ. ಸದಾ ಡಿಫೆರೆಂಟ್ ಆಗಿ ಕಾಣಿಸಿಕೊಳ್ಳಬೇಕು ಎಂದು ಹಂಬಲದಲ್ಲಿರುವ ಉರ್ಫಿ ಸದ್ಯ ಬಾಲಿವುಡ್ ಫ್ಯಾಷನ್ ಲೋಕಕ್ಕೆ ಸೆಡ್ಡು ಹೊಡೆಯುವ ನಟಿ ಎಂದರೆ ತಪ್ಪಾಗಲಾರದು. ಆದರೀಗ ಡಿಪರೆಂಟ್ ಆಗಿ ಆಲೋಚಿಸಿದ ಉರ್ಫಿ ಕಂಪ್ಯೂಟರ್ ಕೀ ಬೋರ್ಡನ್ನೇ ತನ್ನ ಮೈ ಸಿಂಗರಿಸಿಕೊಂಡು ಬಂದಿದ್ದಾಳೆ.

ಈಕೆಯ ಮೈಮಾಟ ಕಂಡರೆ ಕೀ ಬೋರ್ಡ್ ಕಂಡು ಹಿಡಿದ ಪಿತಾಮಹ ಬದುಕಿದ್ದರೆ ಒಂದು ಬಾರಿ ಬೆಚ್ಚಿ ಬೀಳೋದರಲ್ಲಿ ಅನುಮಾನವೇ ಇಲ್ಲ.

ಹಾಳಾದ ಕಂಪ್ಯೂಟರ್ ಕೀ ಬೋರ್ಡ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದವರಿಗೆ ಉರ್ಫಿ ಪ್ಯಾಂಟ್ ಹೊಲಿಸಿರುವುದನ್ನು ಕಂಡರೆ ಅಚ್ಚರಿಯಾಗಬಹುದು. ಹಾಗೆಯೇ ಉದ್ದನೆಯ ಕೀ ಬೋರ್ಡನ್ನು ಕತ್ತಿಗೆ ನೇತು ಹಾಕಿಕೊಳ್ಳುವ ಮೂಲಕ ಸಿಂಗರಿಸಿಕೊಂಡು ಬಂದಿದ್ದಾಳೆ ಈ ನಟಿ.

ಉರ್ಫಿ ತನ್ನ ಹೊಸ ಅವತಾರವನ್ನ ಇನ್ಸ್ಟಾದಲ್ಲೂ ಹಂಚಿಕೊಂಡಿದ್ದಾಳೆ. ಕೀ ಬೋರ್ಡ್ ಉರ್ಫಿಯನ್ನು ಕಂಡು ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಕೆಲವರು ಹೊಗಳಿದರೆ, ಇನ್ನು ಕೆಲವರು ತೆಗಳಿದ್ದಾರೆ. ಒಟ್ಟಿನಲ್ಲಿ ಇದ್ಯಾವುದಕ್ಕೆ ಕ್ಯಾರೆ ಅನ್ನದೆ ಉರ್ಫಿ ಮಾತ್ರ ತನ್ನ ಫ್ಯಾಷನ್ ಲೋಕದಲ್ಲಿ ತೇಲಾಡುತ್ತಿರುವುದು ಮಾತ್ರ ಸುಳ್ಳಲ್ಲ.

You cannot copy content from Baravanige News

Scroll to Top