ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್, ಲೂಸ್ ಮಾದ ಯೋಗಿ ಆಭಿನಯದ ಕೋಲಾರ 1990 ಸಿನಿಮಾದಲ್ಲಿ ನಟಿಸಿದ್ದ ನಟಿ ನೇಹಾ ಸರ್ವಾರ್ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದೈಹಿಕ ಹಿಂಸೆ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಐದು ವರ್ಷದ ಹಿಂದೆ ನಟಿ ನೇಹಾ ಉದ್ಯಮಿ ರಾಹುಲ್ ಅವರನ್ನು ಮದ್ವೆಯಾಗಿದ್ದರು. ಕೆಲಸವಿಲ್ಲದೆ ಮನೆಯಲ್ಲಿಯೇ ಇರ್ತಿದ್ದ ಪತಿ ರಾಹುಲ್ ನನ್ನ ಮೇಲೆ ದೈಹಿಕ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಗಂಡನ ವಿರುದ್ಧ ಆರೋಪ ಮಾಡಿದ್ದಾರೆ. ಜೊತೆಗೆ ಬಸವೇಶ್ವರ ನಗರ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಾರೆ.
ನೇಹಾ ಸರ್ವಾರ್ 4 ಕನ್ನಡ, 2 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಬೆತ್ತನಗೆರೆ, ಲೂಸ್ ಮಾದ ಆಭಿನಯದ ಕೋಲಾರ 1990, ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್ ಮತ್ತು ತಮಿಳಿನ ಊಟಿ ಸೇರಿ 6 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಪತಿಯ ವಿರುದ್ಧ ದೈಹಿಕ ಕಿರುಕುಳ ಆರೋಪ.. ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ವುಡ್ ನಟಿ
