Saturday, July 27, 2024
Homeಸುದ್ದಿಇಂದು ವರ್ಷದ ಕೊನೆಯ ಚಂದ್ರಗ್ರಹಣ: ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

ಇಂದು ವರ್ಷದ ಕೊನೆಯ ಚಂದ್ರಗ್ರಹಣ: ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

ಬೆಂಗಳೂರು: ಇಂದು (ಶನಿವಾರ) ಈ ವರ್ಷದ ಕೊನೆಯ ಗ್ರಹಣವಾಗಿರುವ ಚಂದ್ರಗ್ರಹಣ ಸಂಭವಿಸಲಿದೆ.

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಉಂಟಾಗುತ್ತದೆ. ಚಂದ್ರ ಮಸುಕಾಗಿ ಕಾಣುತ್ತ ಬಳಿಕ ಕ್ರಮೇಣ ಕೆಂಪಾಗುವುದು ಚಂದ್ರಗ್ರಹಣದ ಸಂದರ್ಭದಲ್ಲಿ ನಡೆಯುತ್ತದೆ.

ಇಂದು ರಾತ್ರಿ 11.31ಕ್ಕೆ ಆರಂಭವಾಗಲಿರುವ ಈ ಭಾಗಶಃ ಚಂದ್ರಗ್ರಹಣ ಬೆಳಗ್ಗಿನ ಜಾವ 3.36 ಹಾಗೆ ಕೊನೆಯಾಗಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ.

ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

ಚಂದ್ರಗ್ರಹಣ ವಿಶೇಷತೆ ಏನು..?: ಈ ಚಂದ್ರಗ್ರಹಣ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸಲಿದೆ. 30 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅಪರೂಪ ವಿಸ್ಮಯ ಸಮಯದಲ್ಲಿ ಚಂದ್ರ ಮೇಷ ರಾಶಿಯಲ್ಲಿರಲಿದ್ದಾನೆ. ಗುರು-ಚಂದ್ರರು ಸೇರಿ ಮೇಷದಲ್ಲಿ ಗಜಕೇಸರಿ ಯೋಗ ರೂಪಿಸುವರು. ಗಜಕೇಸರಿ ಯೋಗದಲ್ಲಿ ಗ್ರಹಣ ಸಂಭವಿಸೋದ್ರಿಂದ ಕೆಲ ರಾಶಿಯವರಿಗೆ ಯೋಗ ಎಂದು ನಂಬಲಾಗಿದೆ.

ಪುರಾಣದ ನಂಬಿಕೆಯ ಪ್ರಕಾರ, ಹುಣ್ಣಿಮೆಯ ರಾತ್ರಿ ರಾಹು ಮತ್ತು ಕೇತು ಚಂದ್ರನನ್ನು ಆವರಿಸಲು ಪ್ರಯತ್ನಿಸಿದಾಗ ಚಂದ್ರನ ಮೇಲೆ ಗ್ರಹಣ ಸಂಭವಿಸುತ್ತದೆ. ಅದೇ ಸಮಯದಲ್ಲಿ ಸೂತಕ ಅವಧಿಯು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂತಹ ಗ್ರಹಣದ ಸಂದರ್ಭ ಏನು ಮಾಡಿದ್ರೇ ಒಳಿತು..? ಚಂದ್ರಗ್ರಹಣದ ಎಫೆಕ್ಟ್ ನಿಂದ ಪಾರಾಗಲು ದಾರಿ ಇದ್ಯಾ..? ಮನಃಕಾರಕ ಚಂದ್ರನಿಗೆ ಗ್ರಹಣವಾದ್ರೇ ಪ್ರಭಾವ ಹೇಗಿರಲಿದೆ..? ಚಂದ್ರಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಡೀಟೈಲ್ ಇಲ್ಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News