ಹುಲಿ ಉಗುರಿನ ಜೊತೆ ಜೊತೆಗೆ ಗೋಕಳ್ಳರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಿ; ಯಶ್ ಪಾಲ್ ಸುವರ್ಣ

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸುವ ರಾಜ್ಯ ಸರಕಾರ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಗೋಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಚರ್ಮ, ಉಗುರು, ನವಿಲು ಗರಿಗಳ ಬಗ್ಗೆ ವಿಶೇಷ ಮುತವರ್ಜಿಯಿಂದ ತನಿಖೆ ನಡೆಸಿ ವನ್ಯ ಜೀವಿಗಳ ಸಂರಕ್ಷಣೆಗೆ ಒತ್ತು ನೀಡುತ್ತಿರುವುದು ಸ್ವಾಗತಾರ್ಹ.

ಆದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಬಹುಸಂಖ್ಯಾತ ಹಿಂದೂಗಳ ಪಾಲಿನ ಪೂಜ್ಯನೀಯ ಗೋವು, ಬಡ ಹೈನುಗಾರ ಕೃಷಿಕರ ಜೀವನಾಧಾರವಾಗಿರುವ ಗೋವುಗಳ ನಿರಂತರ ಕಳ್ಳತನ, ಅಕ್ರಮ ಕಸಾಯಿಖಾನೆಗಳ ಮೂಲಕ ಅಮಾನುಷ ಹತ್ಯೆ ನಡೆಯುತ್ತಿದ್ದರೂ ಸರಕಾರದ ದಿವ್ಯ ಮೌನ ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಗಾದೆಯನ್ನು ನೆನಪಿಸುತ್ತಿದೆ.

ವನ್ಯ ಜೀವಿಗಳ ಸಂರಕ್ಷಣೆಗೆ ನೀಡುವ ಆದ್ಯತೆ ಗೋಮಾತೆಯ ರಕ್ಷಣೆಗೂ ರಾಜ್ಯ ಸರಕಾರ ನೀಡಲಿ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

You cannot copy content from Baravanige News

Scroll to Top