Tuesday, September 10, 2024
Homeಸುದ್ದಿರಾಜ್ಯಪಬ್ ಜಿ ಆಡ್ತೀರಾ? ಹಾಗಾದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ; ಸ್ಟೋರಿ ಓದಿದ್ರೆ ಶಾಕ್...

ಪಬ್ ಜಿ ಆಡ್ತೀರಾ? ಹಾಗಾದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ; ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ

ಬೆಂಗಳೂರು : ಜನರ ಜೀವನ ಶೈಲಿ ತುಂಬಾ ಬದಲಾಗಿದೆ. ಎಲ್ಲವೂ ಬೆರಳ ತುದಿಯಲ್ಲಿಯೇ ಸಿಗ್ತಾಯಿದೆ. ಆದ್ರೆ ಅದೇ ಬೆರಳುಗಳಿಗೆ ಟ್ರಬಲ್ ನೀಡುವ ಸಮಸ್ಯೆಯೊಂದು ಕಾಡಲಾರಂಭಿಸಿದೆ. ನೀವು ನಿರಂತರವಾಗಿ ಸಿಸ್ಟಂ ಟೈಪ್ ಮಾಡ್ತಾ ಇದ್ದು, ಮೊಬೈಲ್ ಕೂಡ ಕಂಟಿನ್ಯೂಯಸ್ ಆಗಿ ಸ್ಕ್ರಾಲ್ ಮಾಡುವ ಅಭ್ಯಾಸ ಇದ್ರೆ ಈ ಸ್ಟೋರಿ ನೋಡಲೇಬೇಕು.

ಪಬ್ ಜೀ ಆಟ, ಮೊಬೈಲ್ ಗೇಮಿಂಗ್ ಚಟ ಹೆಬ್ಬೆರಳಿಗೆ ತರುತ್ತೆ ಕಂಟಕ

ಊಟ, ತಿಂಡಿ ಬಿಡ್ತಾರೆ. ಓದು, ಕೆಲಸನೂ ಬಿಡ್ತಾರೆ.. ಆದ್ರೆ ಪಬ್ಜಿ ಗೇಮ್ ಆಡೋದನ್ನ ಮಾತ್ರ ಬಿಡೋದಿಲ್ಲ. ಇದು ಪಬ್ ಜಿ ಗೇಮ್ ಅಡಿಕ್ಟ್ಗಳ ಪರಿಸ್ಥಿತಿ. ನಿಮಗೂ ಕೂಡ ಪಬ್ ಜಿ ಗೇಮ್ನ ಕ್ರೇಜ್ ಸಿಕ್ಕಾಪಟ್ಟೆ ಇದ್ರೆ, ಈ ಸುದ್ದಿಯನ್ನ ಗಮನ ಇಟ್ಟು ನೋಡ್ಬೇಕು. ಇಲ್ಲದಿದ್ರೆ ನಿಮ್ಮ ಹೆಬ್ಬರೆಳಿಗೆ ಆಪತ್ತು ಫಿಕ್ಸ್.

ಸಾಫ್ಟ್ವೇರ್ ಉದ್ಯೋಗಿಗಳಿಗ ಹಾಗೂ ಮೊಬೈಲ್ ಗೆ ತೀರ ಅಡಿಕ್ಟ್ ಹಾಗೂ ಪಬ್ ಜೀ ಆಟ ಆಡೋರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ. 2 ರಷ್ಟು ಜನರು ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಹಿಂದಿನ ಡಾಟಾಗೆ ಹೋಲಿಸಿದರೆ ಸಿಲಿಕಾನ್ ಸಿಟಿಯಲ್ಲಿ ಈ ಸಂಖ್ಯೆ ಬಹುತೇಕ ಹೆಚ್ಚಳವಾಗಿದೆ.

ಕಾರ್ಪಲ್ ಟನಲ್ ಸಿಂಡ್ರೋಮ್

ಪಬ್ ಜಿ ಚಟ ಹೆಚ್ಚಾದ್ಮೇಲೆ ಯುವ ಜನರನ್ನ ಕಾರ್ಪಲ್ ಟನಲ್ ಸಿಂಡ್ರೋಮ್ ಅನ್ನೋ ಸಮಸ್ಯೆಯೊಂದು ಕಾಡ್ತಿದೆ. ಮೊಬೈಲ್, ಕಂಪ್ಯೂಟರ್ಗಳ ಬಳಕೆ ಹೆಚ್ಚಾಗಿದ್ದರಿಂದ, ಈ ಸಮಸ್ಯೆಯೂ ಹೆಚ್ಚಾಗ್ತಿದೆಯಂತೆ. ಇದು ಮುಖ್ಯವಾಗಿ ಕಾಣಿಸಿಕೊಳ್ಳೋದು ಹೆಬ್ಬೆರಳಿನಲ್ಲಿ. ಈ ಸಿಂಡ್ರೋಮ್ ಕಾಣಿಸಿಕೊಂಡ್ರೆ, ವಿಪರೀತ ನೋವಿನಿಂದಾಗಿ ಹೆಬ್ಬೆರಳು ಬಾಗಿಬಿಡುತ್ತಂತೆ. ನಂತರ ತೋರು ಬೆರಳು ಹಾಗೂ ಮಧ್ಯದ ಬೆರಳುಗಳಿಗೂ ಇದು ಆವರಿಸುವ ಸಾಧ್ಯತೆಯು ಇರುತ್ತೆ. ಸಮಸ್ಯೆ ಅನುಭವಿಸುವ ವ್ಯಕ್ತಿಗೂ ಅರಿವಿಗೆ ಬರದಂತೆ ಬೆರಳುಗಳು ಅಂಟಿಕೊಂಡು ಬಿಡ್ತವೆ. ಮರಗಟ್ಟಿದ ಸ್ಥಿತಿಯನ್ನ ತಲುಪುತ್ತೆ. ಈ ಹಿಂದೆ ಇದು ಡಯಾಬಿಟಿಸ್ನಿಂದ ಬಳಲುವವರಲ್ಲಿ ಕಾಣಿಸುತ್ತಿತ್ತು. ಆದ್ರೀಗ ನಿತ್ಯವೂ ವೈದ್ಯರ ಬಳಿ ಈ ಸಮಸ್ಯೆ ಹೇಳಿಕೊಂಡು 10 ರಿಂದ 15 ಮಂದಿ ಬರ್ತಿದ್ದಾರೆ. ಇದಕ್ಕೆ ಕಾರಣ ಪಬ್ ಜಿ ಅಡಿಕ್ಷನ್ ಅಂತಿದ್ದಾರೆ ವೈದ್ಯರು.

ಒಟ್ನಲಿ ಕಂಪ್ಯೂಟರ್ ಮೊಬೈಲ್ ಬಳಕೆ, ಕಣ್ಣಿಗೆ ಮಾತ್ರವಲ್ಲದೆ ಬೆರಳುಗಳ ಮೇಲು ಬರೆ ಹಾಕಲು ಶುರುಮಾಡಿದ್ದು. ಸಮಸ್ಯೆಗಳಿಂದಾ ತಪ್ಪಿಸಿಕೊಳ್ಳಲು ಆದಷ್ಟೂ ಕಂಪ್ಯೂಟರ್ ಹಾಗೂ ಮೊಬೈಲ್ ಗಳಿಂದ ದೂರ ಇರೋದು ಉತ್ತಮ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News