ಬೆಂಗಳೂರು, ಅ 26: ಹುಲಿ ಉಗುರು ಧರಿಸಿದವರ ವಿರುದ್ಧ, ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ನಟ ದರ್ಶನ್, ನಿಖಿಲ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದಾರೆ. ಇದೀಗ ಇದನ್ನು ಪ್ರಶ್ನಿಸಿ ನಟ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ಅರಣ್ಯಾಧಿಕಾರಿಗಳ ದಾಳಿ ಕಾನೂನು ಬಾಹಿರವಾಗಿದ್ದು, ಅರಣ್ಯಾಧಿಕಾರಿಗಳ ಕ್ರಮ ಸರಿ ಇಲ್ಲ ಎಂದು ಹೈಕೋರ್ಟ್ ಗೆ ಜಗ್ಗೇಶ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಇನ್ನು ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ ಎಂದು ಘೋಷಿಸಲು ಮನವಿ ಮಾಡಿಕೊಂಡಿದ್ದು, ಜೊತೆಗೆ ಅರಣ್ಯಾಧಿಕಾರಿಗಳು ಕೊಟ್ಟಿರುವ ನೋಟೀಸ್ ಅನ್ನು ರದ್ದು ಪಡಿಸಲು ನಟ ಜಗ್ಗೇಶ್ ಮನವಿ ಸಲ್ಲಿಸಿದ್ದಾರೆ.