Saturday, July 27, 2024
Homeಸುದ್ದಿಕರಾವಳಿಶನಿವಾರ, ಭಾನುವಾರ ವರ್ಷದ ಕೊನೇ ಚಂದ್ರಗ್ರಹಣ ; 30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯ : ಕುಕ್ಕೆ...

ಶನಿವಾರ, ಭಾನುವಾರ ವರ್ಷದ ಕೊನೇ ಚಂದ್ರಗ್ರಹಣ ; 30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯ : ಕುಕ್ಕೆ ಸುಬ್ರಹ್ಮಣ್ಯ, ಕಟೀಲಿನಲ್ಲಿ ದೇವರ ದರ್ಶನ ಸಮಯ ಬದಲು

ಬೆಂಗಳೂರು : ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದೆ. ಇತ್ತೀಚೆಗಷ್ಟೇ ಸೂರ್ಯ ಗ್ರಹಣವಾಯ್ತು. ಅಕ್ಟೋಬರ್ 28ಕ್ಕೆ ಚಂದ್ರಗ್ರಹಣ ವಿಸ್ಮಯ ನಡೆಯಲಿದೆ.

ಅಕ್ಟೋಬರ್ 28 ರಂದು ಚಂದ್ರಗ್ರಹಣ ಇರಲಿದೆ. ಅಕ್ಟೋಬರ್ 29ಕ್ಕೂ ಇದರ ಪ್ರಭಾವ ತಟ್ಟಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣ ಅಮಂಗಳ, ಸೂತಕದ ಛಾಯೆ ಎನ್ನುವ ನಂಬಿಕೆ ಇದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು ಭಾರತದಲ್ಲಿಯೂ ಗೋಚರಿಸಲಿದೆ.

ಹಾಗಾದ್ರೆ ಈ ಚಂದ್ರಗ್ರಹಣದ ವಿಶೇಷತೆ ಏನು ಯಾವ ಸಮಯಕ್ಕೆ ಆರಂಭವಾಗುತ್ತೆ ಗ್ರಹಣ ಮೋಕ್ಷ ಕಾಲದ ವಿವರ ಇಲ್ಲಿದೆ

ಗ್ರಹಣದ ಅವಧಿ (ವಿಜ್ಞಾನಿಗಳ ಪ್ರಕಾರ) : ಅಕ್ಟೋಬರ್ -28ರ ರಾತ್ರಿ 11.30ಕ್ಕೆ ಸಂಭವಿಸಿ ಅಕ್ಟೋಬರ್ 29 ರ 2.30ರವರೆಗೆ ಇರಲಿದೆ.
ಗ್ರಹಣದ ಅವಧಿ (ಜ್ಯೋತಿಷಿಗಳ ಪ್ರಕಾರ): ಮಧ್ಯರಾತ್ರಿ 1.04 ಕ್ಕೆ ಆರಂಭ. 2:22ಕ್ಕೆ ಅಂತ್ಯ.

ವಿಶೇಷತೆ ಏನು..?

ರಾಹುಗ್ರಸ್ಥ ಚಂದ್ರಗ್ರಹಣವಿದು. ಭಾರತದಲ್ಲಿ ಪಾಶ್ರ್ವವಾಗಿ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ.

ಇನ್ನು ವಿಜ್ಞಾನಿಗಳ ಪಾಲಿಗೆ ಇದು ವಿಸ್ಮಯವಾಗಲಿದೆ. ಈಗಾಗಿ ನೆಹರೂ ತಾರಾಲಯದಲ್ಲಿ ಕೂಡ ಗ್ರಹಣ ವೀಕ್ಷಣೆಗೆ ಅವಕಾಶವಿರಲಿದೆ. ಒಟ್ಟಾರೆ ಗ್ರಹಣವನ್ನು ಸೂತಕದ ಛಾಯೆ ಅಂತಾ ಕೆಲವರು ಅಂದುಕೊಂಡ್ರೆ ಇನ್ನು ಕೆಲವರು ಖಗೋಳ ವಿಸ್ಮಯವಾಗಿ ಇದನ್ನು ನೋಡುತ್ತಾರೆ.

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.



ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರಾತ್ರಿಯ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯವಾಗಲಿದ್ದು, ಬಳಿಕ ದೇವರ ದರ್ಶನ ಇರುವುದಿಲ್ಲ, ರಾತ್ರಿಯ ಭೋಜನ ಇರುವುದಿಲ್ಲ. ಸಾಯಂಕಾಲ ಆಶ್ಲೇಷಾ ಬಲಿ ಸೇವೆಯೂ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.



ಕಟೀಲು ದೇವಸ್ಥಾನ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರಿಗೆ ದೇವಿಯ ದರ್ಶನ ಸಮಯ ಬದಲಾವಣೆ ಇಲ್ಲ. ರಾತ್ರಿಯ ಮಹಾಪೂಜೆ ಸಾಯಂಕಾಲ ಆರೂವರೆ ಒಳಗೆ ಮುಗಿಯುತ್ತದೆ. ಗ್ರಹಣದ ಸಮಯ ವಿಶೇಷ ಅಭಿಷೇಕ, ಮಧ್ಯಕಾಲದಲ್ಲಿ ವಿಶೇಷ ಅಭಿಷೇಕ ಇರುತ್ತದೆ. ಗ್ರಹಣ ಸಮಯಕ್ಕೆ ದೇವಿಯ ದರ್ಶನಕ್ಕೆ ತುಪ್ಪ, ಎಣ್ಣೆ ಸಮರ್ಪಣೆಗೆ ಅವಕಾಶ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News