ಹುಲಿ ಉಗುರಿನ ಪೆಂಡೆಂಟ್ ತಂದ ಕುತ್ತು; ಸೆಲೆಬ್ರಿಟಿಗಳ ವಿರುದ್ಧ ಸಾಲು, ಸಾಲು ದೂರು; ಕಾನೂನು ಕ್ರಮ ಜಾರಿಯಾಗುತ್ತಾ?

ಬೆಂಗಳೂರು : ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಸಾಲು ಸಾಲು ಸೆಲೆಬ್ರಿಟಿಗಳ ಫೋಟೋಗಳು ವೈರಲ್ ಆಗುತ್ತಿವೆ.

ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ.

ವರ್ತೂರು ಸಂತೋಷ್ ಅವರ ಬಂಧನದ ಬಳಿಕ ಉಳಿದ ಸೆಲೆಬ್ರಿಟಿಗಳ ವಿರುದ್ಧವೂ ಅದೇ ರೀತಿಯ ಕಾನೂನು ಕ್ರಮ ಜರುಗಿಸೋ ಒತ್ತಾಯ ಕೇಳಿ ಬರುತ್ತಿದೆ.

ಹುಲಿ ಉಗುರಿನ ಕ್ರೇಜ್ ರಾಜ್ಯದ ಹಲವು ಸೆಲೆಬ್ರಿಟಿಗಳಿಗೆ ಮುಳುವಾಗುವ ಸಾಧ್ಯತೆ ಇದೆ. ಸೆಲೆಬ್ರಿಟಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಹುಲಿ ಉಗುರು ಬಳಸುತ್ತಿರುವ ಸೆಲೆಬ್ರಿಟಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ.

ಅಮಾಯಕರ ಮೇಲೆ ಮಾತ್ರ ಕ್ರಮ ಕೈಗೊಳಲಾಗ್ತಿದೆ. ನಿನ್ನೆಯೇ ನಾವು ಕ್ರಮಕ್ಕೆ ಆಗ್ರಹಸಿ ದೂರು ಕೊಟ್ಟಿದ್ದೇವೆ. ನಟ ಜಗ್ಗೇಶ್, ಅವದೂತ ವಿನಯ್ ಗುರೂಜಿ, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮೇಲೂ ದೂರು ಕೊಡುತ್ತೇವೆ. ಅರಣ್ಯಾಧಿಕಾರಿಗಳು ಸೆಲೆಬ್ರಿಟಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಒತ್ತಡಕ್ಕೆ ಮಣಿಯದೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

You cannot copy content from Baravanige News

Scroll to Top