Wednesday, May 29, 2024
Homeಸುದ್ದಿರಾಜ್ಯ‘ಜೈಲರ್’ ಚಿತ್ರದ ವರ್ಮನ್ ಜೈಲು ಪಾಲು.. ವಿಲನ್ ವಿನಾಯಕನ್‌ ರಿಯಲ್‌ ಆಗಿ ಮಾಡಿದ ಕಿರಿಕ್‌ ಏನು?

‘ಜೈಲರ್’ ಚಿತ್ರದ ವರ್ಮನ್ ಜೈಲು ಪಾಲು.. ವಿಲನ್ ವಿನಾಯಕನ್‌ ರಿಯಲ್‌ ಆಗಿ ಮಾಡಿದ ಕಿರಿಕ್‌ ಏನು?

ಜೈಲರ್ ಇತ್ತೀಚೆಗೆ ಸೂಪರ್ ಹಿಟ್ ಆದ ಸಿನಿಮಾ. ಜೈಲರ್‌ ಚಿತ್ರದಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್ಗೆ ಟಕ್ಕರ್ ಕೊಟ್ಟಿದ್ದ ನಟ ರಾವಣ ವಿನಾಯಕನ್ ಪಾತ್ರ ಮರೆಯಲು ಸಾಧ್ಯವಿಲ್ಲ. ವರ್ಮನ್ ಹೆಸರಲ್ಲಿ ಅಬ್ಬರಿಸಿದ್ದ ವಿನಾಯಕನ್ ಸದ್ಯ ಜೀವನದಲ್ಲೂ ಪೊಲೀಸರ ಪಾಲಿಗೆ ವಿಲನ್ ಆಗಿದ್ದಾರೆ. ಅಷ್ಟೇ ಅಲ್ಲ, ಜೈಲು ಕೂಡ ಸೇರಿದ್ದಾರೆ.

ಜೈಲರ್ ಸಿನಿಮಾದ ವರ್ಮನ್ ಮೊನ್ನೆ ಮೊನ್ನೆಯಷ್ಟೇ ತೆರೆ ಮೇಲೆ ಅಬ್ಬರಿಸಿದ್ದ ಖಡಕ್ ವಿಲನ್, ಈಗ ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಎದುರು ಅಬ್ಬರಿಸಿದ್ದ ವಿನಾಯಕನ್ ಪಾತ್ರಕ್ಕೆ ಇಡೀ ಬಣ್ಣದ ಲೋಕವೇ ಬೆರಗಾಗಿತ್ತು. ಆದ್ರೆ, ಈಗ ಜೈಲರ್ನ ವಿಲನ್ ಜೈಲು ಸೇರಿದ್ದಾರೆ. ಅಂದ್ಹಾಗೆ ಹೇಳ್ತಿರೋದು ಇದು ರೀಲ್ ಅಲ್ಲ, ವಿನಾಯಕನ್ ರಿಯಲ್ ಸ್ಟೋರಿ..

‘ಜೈಲರ್’ ಚಿತ್ರದ ವಿಲನ್ ರೋಲರ್ಗೆ ಜೈಲು! ; ಎಣ್ಣೆ ಏಟಲ್ಲಿ ಪೊಲೀಸರ ಜತೆ ವರ್ಮನ್ ಕಿರಿಕ್!

ಜೈಲರ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ವಿನಾಯಕನ್ ಬಂಧನವಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ನಟ ವಿನಾಯಕನ್ ರನ್ನ ಕೇರಳದ ಎರ್ನಾಕುಲಂ ನಗರ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ ವಿನಾಯಕನ್ ಬಂಧನ ಆಗಿದ್ಯಾಕೆ ಅನ್ನೋದು ಇಂಟ್ರೆಸ್ಟಿಂಗ್. ಎಣ್ಣೆ ಏಟಲ್ಲಿನ ಗಲಾಟೆಗೆ ಜೈಲು ಕಂಬಿ ಎಣಿಸಬೇಕಾಗಿದೆ..

‘ಜೈಲು ಸೇರಿದ ವಿಲನ್’

ಅಪಾರ್ಟ್‌ಮೆಂಟ್‌ನಲ್ಲಿ ವಿನಾಯಕನ್ ಜೋರು ಶಬ್ದ
ತೊಂದರೆಯ ಕಾರಣಕ್ಕೆ ಅಕ್ಕ-ಪಕ್ಕದವರಿಂದ ಠಾಣೆಗೆ ಮಾಹಿತಿ.,
ವಿನಾಯಕನ್ನ್ನ ಠಾಣೆಗೆ ಹಾಜರಾಗುವಂತೆ ಸೂಚನೆ, ಮತ್ತೆ ಕುಡಿದು ಬಂದು ಠಾಣೆಯಲ್ಲಿ ವರ್ಮನ್ ಕ್ಯಾತೆ, ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಬಂಧನ, ವೈದ್ಯಕೀಯ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ರವಾನೆ.

ಮಲಯಾಳಂ ನಟ ವಿನಾಯಕನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಜೈಲರ್ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಸಣಕಲು ದೇಹ ಹಾಗೂ ರಗಡ್ ಲುಕ್‌ನಿಂದ ಗಮನ ಸೆಳೆಯುವ ವಿನಾಯಕನ್ ತಮ್ಮ ಅಭಿನಯದಿಂದಲೂ ಮೋಡಿ ಮಾಡಿದ್ದಾರೆ. 1995ರಲ್ಲಿ ಮಂತ್ರಿಕಂ ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿಯಾದ ವಿನಾಯಕನ್, ಡ್ಯಾನ್ಸರ್ ಆಗಿ ಬಳಿಕ ನಟನಾಗಿ ಬಡ್ತಿ ಪಡೆದ್ರು.

ತೆರೆ ಮೇಲೆ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಸದ್ದು ಮಾಡುತ್ತಿದ್ದ ನಟ, ಈಗ ತಪ್ಪು ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಜೈಲರ್ ಸಿನಿಮಾ ಬಳಿಕ ಸಾಕಷ್ಟು ಅವಕಾಶಗಳು ಅರಸಿ ಬರ್ತಿರುವ ಹೊತ್ತಲ್ಲಿ ವಿನಾಯಕನ್ ಪೊಲೀಸರ ಅತಿಥಿಯಾಗಿದ್ದು ವಿಪರ್ಯಾಸ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News