ಶಿರ್ವ, ಅ.17: ಇಲ್ಲಿನ ಪಿಲಾರು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಘಟನೆ ನಡೆದಿದೆ.
ಅರುಣ್ ವಿಜಯ್ ಎಂಬವರ ಹಳೆಯ ಹಂಚಿನ ಮನೆಯ ಅಡುಗೆ ಕೋಣೆಯ ಮರದ ಕಿಟಕಿಯ ಪಟ್ಟಿಯನ್ನು ಕಿತ್ತು ಒಳನುಗ್ಗಿದ ಕಳ್ಳರು, ಕಪಾಟಿನ ಸೇಫ್ ಲಾಕರ್ ನಲ್ಲಿದ್ದ 8,00,500 ಮೌಲ್ಯದ ಒಟ್ಟು 179.4 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.