ಉಡುಪಿ, ಅ.16: ಮನೆಯ ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡುವುದಾಗಿ ಹಣ ಪಡೆದು ವ್ಯಕ್ತಿಯೊಬ್ಬರಿಗೆ ಮೋಸ ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೆ ಒಳಗಾದವರು ಮಣಿಪಾಲದ ಬಡಗಬೆಟ್ಟು ಗ್ರಾಮದ ಪ್ರಗತಿ ನಗರ ಎಂಬಲ್ಲಿ ಪುಟ್ಟು ನಾಯ್ಕ.ಪುಟ್ಟು ನಾಯ್ಕ. ಪುಟ್ಟು ನಾಯ್ಕ ಎಂಬಾತನ ಮನೆಯ ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡುವುದಾಗಿ 2,15,000ರೂ.ಗೆ ಜುಲೈ.5 ರಂದು ಪ್ರಶಾಂತ್ ನಾಯ್ಕ(45) ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಅಲ್ಲದೇ ಈ ಸಂಬಂಧ ಪ್ರಶಾಂತ್ ಮತ್ತು ಅವರ ಮಿತ್ರ ಎನ್.ರಾಘವ ನಾಯ್ಕ ಒಟ್ಟು 1.25ಲಕ್ಷ ರೂ. ಹಣ ನೀಡಿದ್ದರು ಎನ್ನಲಾಗಿದೆ. ಸೆ.4ರಂದು ಮೇಲ್ಚಾವಣಿ ಮಾಡಲು ಪ್ರಾರಂಭಿಸಿದ ಪ್ರಶಾಂತ್ ನಾಯ್ಕ 10 ದಿನಗಳೊಳಗೆ ಮಾಡಿ ಕೊಡುವುದಾಗಿ ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ನೀಡಿದ್ದರು.
ಆದರೆ ಪುಟ್ಟು ನಾಯ್ಕ ಮನೆಯ ಮೇಲ್ಚಾವಣಿ ಕಾಂಕ್ರೀಟ್ ಮಾಡಿ ಕೊಡದೇ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
ಆರೋಪಿ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.