ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಡಿಯೋಗಳು ಭಾರೀ ವೈರಲ್ ಆಗಿ ಚರ್ಚೆಗೆ ಕಾರಣವಾಗುತ್ತವೆ. ಆ ವಿಡಿಯೋಗಳು ಒಂದು ರೀತಿಯಲ್ಲಿ ಸಂದೇಶದ ರೂಪದಲ್ಲಿ ಜನರಿಗೆ ತಲುಪುತ್ತದೆ. ಹೌದು, ದುಡ್ಡು ಅಂದರೆ ಯಾರಿಗೇ ತಾನೇ ಇಷ್ಟ ಇಲ್ಲ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ. ಈಗಂತೂ ಎಲ್ಲಿ ನೋಡಿದರೂ ಹಣದ ದಾಹವೇ. ಯಾರಿಗೆ ಬೇಡ ಈ ಹಣ, ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಹಾಗೇ ಪತ್ರಿಯೊಬ್ಬರು ದುಡಿಯುವುದು ಹಣಕ್ಕಾಗಿ ಅಲ್ಲವೇ.
ಹೌದು, ನಾವೆಲ್ಲ ಹಣಕ್ಕಾಗಿ ದೊಡ್ಡ ದೊಡ್ಡ ಹುದ್ದೆಗಳನ್ನು ಹುಡುಕಿಕೊಂಡು ಜೀವನ ಸಾಗಿಸಬೇಕು ಎಂದು ಅಂದುಕೊಂಡಿರುತ್ತೇವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋ ಕೂಡ ಹಣದ್ದೇ. ಹೀಗೆ ಇಲ್ಲೊಬ್ಬ ವ್ಯಕ್ತಿ ಭಿಕ್ಷುಕನಂತೆ ವೇಷ ಧರಿಸಿಕೊಂಡು ರಾಜಸ್ಥಾನದ ಜೋಧ್‌ಪುರದ ಹಲವು ಫೋನ್ ಶಾಪ್ಗಳಿಗೆ ಐಫೋನ್ ಖರೀದಿಸಲು ಹೊರಡುತ್ತಾನೆ. ಬೆನ್ನಿಗೆ ತಾನು ಸಂಗ್ರಹಿಸಿದ್ದ ನಾಣ್ಯಗಳ ಚೀಲವನ್ನು ಹೊತ್ತುಕೊಂಡು ಹೋಗಿ ಐಫೋನ್ ಖರೀದಿಸಲು ಮುಂದಾಗುತ್ತಾರೆ. ಆದರೆ ಈ ಭಿಕ್ಷುಕನ ಲುಕ್ ನೋಡಿದ ಅದೆಷ್ಟೋ ಜನರು ಈತನನ್ನು ಒಳಗೆ ಬಿಟ್ಟುಕೊಳ್ಳಲು ನಿರಾಕರಿಸುತ್ತಾರೆ. ಜೊತೆಗೆ ನಾಣ್ಯ ರೂಪದಲ್ಲಿ ಹಣವನ್ನು ಐಫೋನ್ ತೆಗೆದುಕೊಳ್ಳುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಹೀಗೆ ಮತ್ತೊಂದು ಮಗದೊಂದು ಶಾಪ್ಗೆ ಈ ಭಿಕ್ಷುಕನು ಹೋಗುತ್ತಾನೆ. ಐಫೋನ್ ಖರೀದಿಸಲು ಶಾಪ್‌ಗಳಲ್ಲಿ ಹೋಗಿದ್ದಾಗ ಅಲ್ಲಿರೋ ಜನರ ರಿಯಾಕ್ಷನ್ ಹೇಗಿರುತ್ತೆ ಎಂಬುದನ್ನು ಸೆರೆಹಿಡಿಯಲಾಗಿದೆ.
ವ್ಯಕ್ತಿಯೊರ್ವ ಭುಕ್ಷುಕನ ಹಾಗೇ ಬಂದು ಐಫೋನ್-15 ಖರೀದಿಸುವ ಸಲುವಾಗಿ ತನ್ನ ಬಳಿ ಇದ್ದ ಸಂಪೂರ್ಣ ಚಿಲ್ಲರೆಗಳನ್ನು ಬ್ಯಾಗ್‌ಗಳೊಂದಿಗೆ ಬರುತ್ತಾರೆ. ಈ ವೇಳೆ ಹರಿದ ಬನಿಯನ್, ಪಂಚೆ ಹಾಗೂ ಮುಖಕ್ಕೆ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಮೆತ್ತಿಕೊಂಡು ಆ್ಯಪಲ್ ಸ್ಟೋರ್‌ಗೆ ನಗುಮುಖದಲ್ಲೇ ಹೋಗುತ್ತಾನೆ. ಹೀಗೆ ಸ್ಟೋರ್ ಒಳಗಡೆ ಹೋಗುತ್ತಿದ್ದಂತೆ ಸಿಬ್ಬಂದಿಯ ಪ್ರತಿಕ್ರಿಯೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿಯ ಪ್ರಯೋಗವನ್ನು ‘ಎಕ್ಸ್‌ಪರಿಮೆಂಟ್ ಕಿಂಗ್’ ಎನ್ನುವ ಹೆಸರಿನ ಯೂಟ್ಯೂಬ್ ಚಾನಲ್‌ನ ಸಂಯೋಜಕರು ನಿರ್ಮಾಣ ಮಾಡಿದ್ದಾರೆ. ತಮಾಷೆಯ ವಿಡಿಯೋ ಇದಾಗಿದ್ದು. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋ 3.7 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.