ಗೋವಾದಲ್ಲಿ ತೀವ್ರ ಹಲ್ಲೆಗೊಳಗಾದ ಯುವಕನನ್ನು ಮಣಿಪಾಲದಲ್ಲಿ ರಕ್ಷಣೆ

ಉಡುಪಿ : ಮಣಿಪಾಲ ಮುಖ್ಯ ರಸ್ತೆಯಲ್ಲಿ ಗೋವಾದಲ್ಲಿ ಹಲ್ಲೆಗೊಳಗದ ಯುವಕನೋರ್ವ ಎರಡು ದಿನಗಳಿಂದ ರಾತ್ರಿ ಹಗಲು ರಸ್ತೆ ಬದಿ ದುಃಖದಿಂದ ಮರಗುತ್ತಿದ್ದವನನ್ನು ರಾತ್ರಿ ಹೊತ್ತು ಸಮಾಜ ಸೇವಕ ವಿಶು ಶೆಟ್ಟಿಯವರು ರಕ್ಷಿಸಿ ಉಪಚರಿಸಿ ಮಣಿಪಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿಸಿದ ಘಟನೆ ನಡೆದಿದೆ.

ಯುವಕ ಸಕ್ರೆಶ್ವರ ಸಿಂಗ್ (28)ಮೂಲತ: ಉತ್ತರ ಪ್ರದೇಶದವನಾಗಿದ್ದು ಕಾರ್ಮಿಕನಾಗಿ ಗೋವಕ್ಕೆ ಬಂದಿದ್ದು, ದುಡಿದ ಹಣದ ವಿಚಾರದಲ್ಲಿ ಗಲಾಟೆ ಆಗಿ 6 ಜನ ಈತನನ್ನು ಹಿಗ್ಗಾಮುಗ್ಗ ಥಳಿಸಿ ತಲೆ ಹಾಗೂ ದೇಹದ ಭಾಗಗಳಿಗೆ ಘಾಸಿ ಉಂಟು ಮಾಡಿದ್ದಾರೆ.

ಬೆನ್ನು ಎದೆ ಹಾಗೂ ಹೊಟ್ಟೆಯಲ್ಲಿ ಏಟಿನ ಬಾಸುಂಡೆ ತೋರುತ್ತಿದ್ದು ಹೆದರಿ ಪ್ರಾಣ ಭಯದಿಂದ ಉಡುಪಿಗೆ ಬಂದೆ ಎಂದು ಮಾಹಿತಿ ನೀಡಿದ್ದಾನೆ.ಸಂಬಂಧಪಟ್ಟವರು ಜಿಲ್ಲಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ರಕ್ಷಣಾ ಸಮಯದಲ್ಲಿ ಹರೀಶ್ ಪಿತ್ರೋಡಿ ಸಹಕರಿಸಿದ್ದಾರೆ.

You cannot copy content from Baravanige News

Scroll to Top