ಇಂಡಿಯಾ VS ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ : ಟಾಸ್ ಗೆದ್ದ ಭಾರತ ; ಫೀಲ್ಡಿಂಗ್ ಆಯ್ಕೆ

2023ರ ವಿಶ್ವಕಪ್ನ ಹೈವೋಲ್ಟೇಜ್ ಮ್ಯಾಚ್ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಭಾರತದ ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ದುಕೊಂಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಎದುರಾಳಿ ಬಾಬರ್ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದಾರೆ.

ಟೀಮ್ ಇಂಡಿಯಾವು ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದ್ದು ಓಪನರ್ ಆಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಕ್ರೀಸ್ಗೆ ಆಗಮಿಸಲಿದ್ದಾರೆ. ಸದ್ಯ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಗಿಲ್ ಎರಡು ಪಂದ್ಯಗಳ ಬಳಿಕ ಪಾಕ್ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಾರೆ. ಇಶನ್ ಕಿಶನ್ಗೆ ಕೋಕ್ ನೀಡಿ ಗಿಲ್ಗೆ ಅವಕಾಶ ನೀಡಲಾಗಿದೆ. ಇನ್ನು ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಕೊಹ್ಲಿ-ರಾಹುಲ್ ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಸೆಂಚುರಿ ಸಿಡಿಸಿದ್ದರು. ಮತ್ತೆ ಆ ಕ್ಷಣಗಳು ಮರುಕಳಿಸಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಭಾರತದ ಬೌಲಿಂಗ್ ಕೂಡ ಸ್ಟ್ರಾಂಗ್ ಇದ್ದು ಸಿರಾಜ್, ಬೂಮ್ರಾ ಅವರು ಮಾರಕ ಬೌಲಿಂಗ್ ಮಾಡುವ ನೀರಿಕ್ಷೆ ಇದೆ. ಈಗಾಗಲೇ ಟ್ರ್ಯಾಕ್ಗೆ ಮರಳಿರುವ ಬೂಮ್ರಾ ವಿಕೆಟ್ ಪತನಗೊಳಿಸಲು ಅಣಿಯಾಗಿದ್ದಾರೆ. ಆಲ್ರೌಂಡರ್ಗಳಾಗಿ ಹಾರ್ದಿಕ್ ಪಂಡ್ಯ, ಹಾಗೂ ರವಿಂದ್ರ ಜಡೇಜಾ ಕಣದಲ್ಲಿದ್ದಾರೆ. ಆರ್ ಅಶ್ವಿನ್ಗೆ ರೆಸ್ಟ್ ನೀಡಿ ಶಾರ್ದೂಲ್ ಠಾಕೂರ್ಗೆ ಚಾನ್ಸ್ ನೀಡಲಾಗಿದೆ.

ಪಾಕ್ ಬೌಲಿಂಗ್ನಲ್ಲಿ ಪ್ರಬಲ ದಾಳಿ ಮಾಡುವ ಯೋಜನೆ ಹೊಂದಿದೆ. ಹೀಗಾಗಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ ವಿಕೆಟ್ ಉರುಳಿಸಲು ಸಿದ್ಧರಾಗಿದ್ದಾರೆ. ಇನ್ನು ಬಾಬರ್ ಪಡೆಯು ಬ್ಯಾಟಿಂಗ್ ಪ್ರದರ್ಶನ ಅಷ್ಟೊಂದು ಚೆನ್ನಾಗಿದ್ದರೂ ಭಾರತದ ವಿರುದ್ಧ ಆಡುವಾಗ ಕೈ ಸುಟ್ಟುಕೊಳ್ಳುವುದೇ ಹೆಚ್ಚು. ಹೀಗಾಗಿ ಭಾರತಕ್ಕೆ ಇದೊಂದು ವರವಾಗಿ ಪರಿಣಮಿಸಲಿದೆ.

ಭಾರತದ ಪ್ಲೇಯಿಂಗ್- 11

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಜಡೇಜಾ, ಶಾರ್ದೂಲ್ ಠಾಕೂರ್, ಬೂಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್

ಪಾಕ್ ಪ್ಲೇಯಿಂಗ್- 11

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಕ್ಯಾಪ್ಟನ್), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

Scroll to Top