Saturday, July 27, 2024
Homeಸುದ್ದಿಕರಾವಳಿಉಡುಪಿ : ಮನೆಯಿಂದ ಹೊರ ಹೋದ ತಾಯಿ, ಇಬ್ಬರು ಮಕ್ಕಳು ನಾಪತ್ತೆ

ಉಡುಪಿ : ಮನೆಯಿಂದ ಹೊರ ಹೋದ ತಾಯಿ, ಇಬ್ಬರು ಮಕ್ಕಳು ನಾಪತ್ತೆ

ಉಡುಪಿ : ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಾಸ್ ಬಾರದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿರುವ ಮಹಿಳೆಯನ್ನು ಪುತ್ತೂರು ಗ್ರಾಮದ ಕೊಡಂಕೂರು ನಿವಾಸಿ ಅಕ್ಷತಾ (25), ಹೆಣ್ಣು ಮಕ್ಕಳಾದ ವಿದ್ಯಾಶ್ರೀ (7), ಮಲ್ಲು (4) ಎನ್ನಲಾಗಿದೆ.

ಅಕ್ಷತಾ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ಅ.6ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸ್‌ ಬಾರದೇ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.

ಅಕ್ಷತಾ 5 ಅಡಿ ಎತ್ತರ, ಸಾಧಾರಣ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News