23 ಬಾಕ್ಸ್ಗಳಲ್ಲಿ ಬಚ್ಚಿಡಲಾಗಿತ್ತು 42 ಕೋಟಿ ರೂ. ಹಣ.!

ಬೆಂಗಳೂರು (ಅ 13) : ಕಾಂಗ್ರೆಸ್ ಮಾಜಿ ಕಾರ್ಪರೇಟರ್‌ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಅವರ ಬಾಮೈದ ಪ್ರದೀಪ್ ಎಂಬಾತನ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಈ ವೇಳೆ ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಫ್ಲಾಟ್ನಲ್ಲಿ ಬರೊಬ್ಬರಿ 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಗುತ್ತಿಗೆದಾರ ಅಂಬಿಕಾಪತಿ ಅವರ ಪತ್ನಿಯಾಗಿರುವ ಮಾಜಿ ಕಾರ್ಪರೇಟರ್‌ ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಎನ್ನಲಾಗುತ್ತಿದೆ. ಅಶ್ವತಮ್ಮ 2001ರ ಕಾವಲ್ ಬೈರಸಂದ್ರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದರು. ಈ ಫ್ಲಾಟ್ ನ್ನು ಅಶ್ವಥಮ್ಮ ತಮ್ಮ ಸಹೋದರ ಪ್ರದೀಪ್ ಅವರಿಗೆ ಕೊಡಿಸಿದ್ದರು ಎನ್ನಲಾಗಿದೆ. ಅಂಬಿಕಾಪತಿ ಅಶ್ವಥಮ್ಮ ದಂಪತಿಗಳಿಗೆ ಸೇರಿದ ಇತರ ಎರಡು ನಿವಾಸಗಳ ಮೇಲೂ ದಾಳಿ ನಡೆದಿದೆ.

ಐಟಿ ದಾಳಿ ಸ್ವಲ್ಪ ತಡವಾಗುತ್ತಿದ್ದರೂ ಈ ಹಣ ಸಿಗುತ್ತಿರಲಿಲ್ಲ. ಈ ಬೃಹತ್ ಮೊತ್ತದ ಹಣವನ್ನು ತಮಿಳುನಾಡಿಗೆ ಸಾಗಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ.

42 ಕೋಟಿ ಹಣ ಸೀಜ್ ಮಾಡಿದ ಐಟಿ ಅಧಿಕಾರಿಗಳು. ಹಣದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಸಿದ್ದಾರೆ. ಇಡಿ ಅಧಿಕಾರಿಗಳಿಗೂ ಐಟಿ ಮಾಹಿತಿ ನೀಡಲಿದ್ದು, PMLA ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಇ.ಡಿ‌ ಪ್ರವೇಶವಾದರೆ ಸಂಬಂಧಪಟ್ಟ ವ್ಯಕ್ತಿಗಳ ಬಂಧನ ಸಾಧ್ಯತೆ ಇದೆ.

You cannot copy content from Baravanige News

Scroll to Top