ಇಸ್ರೇಲ್ ನಿಂದ 212 ಮಂದಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ

ನವದೆಹಲಿ, ಅ 13: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ನಾಗರಿಕರ ರಕ್ಷಣೆಗೆ ಭಾರತ ಸರ್ಕಾರವು ಆರಂಭಿಸಿದ ‘ಆಪರೇಷನ್‌ ಅಜಯ್’‌ ಕಾರ್ಯಾಚರಣೆಯ ಅಂಗವಾಗಿ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಸ್ರೇಲ್​ನಿಂದ ದೆಹಲಿಗೆ ಬಂದಿಳಿದಿದೆ.

ಒಂದು ಮಗು ಸೇರಿ 2೧೨ ಮಂದಿಯನ್ನು ಹೊತ್ತ ವಿಮಾನವು ಗುರುವಾರ ಸಂಜೆ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟು ಇಂದು ಬೆಳಗ್ಗೆ ಭಾರತಕ್ಕೆ ಬಂದಿಳಿದಿದ್ದು, ಸುರಕ್ಷಿತವಾಗಿ ಹಿಂತಿರುಗಿದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

“ನಾವು ಅಲ್ಲಿ ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲು, ನಮ್ಮನ್ನು ಮರಳಿ ಕರೆತಂದಿದ್ದಕ್ಕೆ ಭಾರತ ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.

You cannot copy content from Baravanige News

Scroll to Top