ಆಪರೇಷನ್ ಅಜಯ್: ಇಸ್ರೇಲ್‌ ನಿಂದ 230 ಮಂದಿ ಭಾರತೀಯರು ಇಂದೇ ತಾಯ್ನಾಡಿಗೆ

ನವದೆಹಲಿ, ಅ 12: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ನಾಗರಿಕರ ರಕ್ಷಣೆಗೆ ಭಾರತ ಸರ್ಕಾರವು ‘ಆಪರೇಷನ್‌ ಅಜಯ್’‌ ಪ್ರಾರಂಭಿಸಿದ್ದು, ಕಾರ್ಯಾಚರಣೆಯ ಮೊದಲ ಭಾಗವಾಗಿ ಇಂದು ರಾತ್ರಿ ಇಸ್ರೇಲ್ನಿಂದ 230 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿದೆ.

ವಿಮಾನವು ಇಸ್ರೇಲ್‌ನಿಂದ ರಾತ್ರಿ 9 ಗಂಟೆಗೆ ಹೊರಡಲಿದ್ದು, ಪ್ರಯಾಣಿಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಸಂತ್ರಸ್ತರ ಎಲ್ಲ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಇಸ್ರೇಲ್ ನಲ್ಲಿ ರಾಯಭಾರಿ ಕಚೇರಿ ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರ ವಿವರ ಸಂಗ್ರಹಿಸಿದ್ದು,ಅವರಿಗೆ ಈಗಾಗಲೇ ವಿಮಾನದ ವಿವರಗಳನ್ನು ನೀಡಲಾಗಿದೆ.

ಯುದ್ಧ ಕಾರಣದಿಂದ ಭಾರತವು ಅಕ್ಟೋಬರ್​​ 7ರಿಂದ ಇಸ್ರೇಲ್ ಗೆ ಎಲ್ಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಈಗ ಅವರನ್ನು ಭಾರತಕ್ಕೆ ಕರೆದುಕೊಂಡ ಬರುವ ವ್ಯವಸ್ಥೆ ಮಾಡಲಾಗಿದೆ.

ಮೂಲಗಳ ಪ್ರಕಾರ ಆಪರೇಷನ್ ಅಜಯ್ ಮೂಲಕ 230 ಭಾರತೀಯರು ಇಂದು ರಾತ್ರಿ ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.

You cannot copy content from Baravanige News

Scroll to Top