Saturday, July 27, 2024
Homeಸುದ್ದಿರಾಜ್ಯಬೀಪ್ ಶಬ್ದದೊಂದಿಗೆ ಮೊಬೈಲ್‌ಗೆ ಬಂತು ಫ್ಲಾಶ್ ಸಂದೇಶ ; ಏನಿದು ಆಲರ್ಟ್ ಮೆಸೇಜ್...??

ಬೀಪ್ ಶಬ್ದದೊಂದಿಗೆ ಮೊಬೈಲ್‌ಗೆ ಬಂತು ಫ್ಲಾಶ್ ಸಂದೇಶ ; ಏನಿದು ಆಲರ್ಟ್ ಮೆಸೇಜ್…??

ಮುಂಬರುವ ದಿನಗಳಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮೊಬೈಲ್‌ಗೆ ಇದೀಗ ಎಚ್ಚರಿಕೆ ರೀತಿಯ ಶಬ್ದದೊಂದಿಗೆ ಫ್ಲಾಶ್ ಸಂದೇಶವೊಂದು ಬಂದಿದೆ.

ಕರ್ನಾಟಕದಲ್ಲಿ ನಡೆದ ಮೊದಲ ಟೆಸ್ಟ್ ಇದಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 11:45ಕ್ಕೆ ಕರ್ನಾಟಕದಲ್ಲಿ ತುರ್ತು ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ರಾಜ್ಯದ ಜನರಿಗೆ ಈ ಸಂದೇಶ ಬಂದಿದೆ. ಬಹುತೇಕರು ಮೊಬೈಲ್ ಸಂದೇಶವನ್ನು ಸ್ವೀಕರಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಫ್ಲ್ಯಾಶ್ ಮೆಸೇಜ್ ಜೊತೆ ವಿಭಿನ್ನ ಶಬ್ದ ಕೂಡ ಮೊಬೈಲ್‌ಗೆ ಬಂದಿದೆ.

ಇದು ಭಾರತ ಸರ್ಕಾರದ ದೂರಸಂಪರ್ಕ

ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಜಾರಿಗೊಳಿಸುತ್ತಿರುವ ಪ್ರಾಧಿಕಾರವು `ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಹಿಂದೆ ಇದರ ಪರೀಕ್ಷಾರ್ಥ ಪ್ರಯೋಗಗಳು ನಡೆದಿದ್ದವು. ಜುಲೈ 20, ಆಗಸ್ಟ್ 17 ಮತ್ತು ಸೆಪ್ಟೆಂಬರ್ 21ರಂದು ದೇಶದ ವಿವಿಧೆಡೆ ಟೆಸ್ಟ್ ಮೆಸೇಜ್‌ಗಳು ಬಂದಿದ್ದವು. ಆಗ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅಲರ್ಟ್ ಮೆಸೇಜ್ ನೀಡಲಾಗಿತ್ತು. ಈಗ ಬಹುತೇಕ ಎಲ್ಲರಿಗೂ ಅಲರ್ಟ್ ಮೆಸೇಜ್ ಬಂದಿರುತ್ತದೆ. ಕೆಲ ನಿಮಿಷಗಳ ಅಂತರದಲ್ಲಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮೆಸೇಜ್ ಕಳುಹಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News