ಮಂಗಳೂರು : ಸ್ಕಿಡ್ ಆಗಿ ಬಿದ್ದ ಸ್ಕೂಟಿ ಸವಾರನ ಮೇಲೆ ಕಾರೊಂದು ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಕುಂಟಿಕಾನ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಕಾವುರು ನಿವಾಸಿ ಕೌಶಿಕ್ (21) ಮೃತ ದುರ್ದೈವಿಯಾಗಿದ್ದಾರೆ.
ಎಜೆ ಆಸ್ಪತ್ರೆಯಿಂದ ಬೈಕಿನಲ್ಲಿ ಹೊ ಬರುತ್ತಿದ್ದಾಗ ಆಟೋ ರಿಕ್ಷಾ ಒಂದು ಕೌಶಿಕ್ ಸ್ಕೂಟಿಗೆ ತಾಗಿದ್ದರಿಂದ ಕೌಶಿಕ್ ಸ್ಕಿಡ್ ಆಗಿ ಬಿದ್ದಿದ್ದಾರೆ.

ಇದೇ ಸಂದರ್ಭ ಕೌಶಿಕ್ ಮೇಲೆ ವೇಗವಾಗಿ ಬಂದ ಕಾರೊಂದು ಹರಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರುಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.