Saturday, July 27, 2024
Homeಸುದ್ದಿರಾಜ್ಯಇದ್ದಕ್ಕಿದ್ದಂತೆಯೇ ಸ್ಟಾರ್ಟ್, ಎದುರಿದ್ದ ಕಾರಿಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್!

ಇದ್ದಕ್ಕಿದ್ದಂತೆಯೇ ಸ್ಟಾರ್ಟ್, ಎದುರಿದ್ದ ಕಾರಿಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್!

ಮೈಸೂರಿನ ರಾಮಾನುಜ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿರುವ ಆ್ಯಂಬುಲೆನ್ಸ್ ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ನಿನ್ನೆ ಬೆಳಗ್ಗೆ ನಡೆದಿರುವ ಈ ಘಟನೆ ಮೈಸೂರಿನ ಜನರಲ್ಲಿ ಅಚ್ಚರಿ ಮೂಡಿಸಿದೆ. ಮೊದಲಿಗೆ ಆ್ಯಂಬುಲೆನ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಕಾರಿಗೆ ಡಿಕ್ಕಿ ಹೊಡೆದಿದೆ.

ನಂತರ ಕೆಲ ನಿಮಿಷಗಳಲ್ಲಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಲ್ಲಿದ್ದವರು ನೀರನ್ನು ಎರಚಿ ಬೆಂಕಿ ನಂದಿಸಿದ್ದಾರೆ. ಆದರೀಗ ಜನರಲ್ಲಿ ಆ್ಯಂಬುಲೆನ್ಸ್ ಇದ್ದಕ್ಕಿದಂತೆ ಯಾಕೆ ಸ್ಟಾರ್ಟ್ ಆಗಿದೆ ಅಂತ ಅನುಮಾನ ಹುಟ್ಟಿಸಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News