ಬೈಂದೂರು : ಯುದ್ಧ ಪೀಡಿತ ಇಸ್ರೇಲ್ನಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸುಮಾರು 20 ಜನರಿದ್ದಾರೆ. ಸದ್ಯಕ್ಕೆ ಅವರು ಇರುವ ಜಾಗ ಸುರಕ್ಷಿತವಾಗಿದ್ದರೂ ಭಯದಿಂದಲೇ ದಿನ ಕಳೆಯುತ್ತಿದ್ದಾರೆ.
ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ದೂರವಾಣಿ ಮೂಲಕ ಇಸ್ರೇಲ್ನಲ್ಲಿರುವ ಬೈಂದೂರು ಭಾಗದ ಜನರನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದಾರೆ. ಸರಕಾರದ ಮೂಲಕ ಅಗತ್ಯ ಇರುವ ಎಲ್ಲ ಸೇವೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಇಸ್ರೇಲ್ ನಲ್ಲಿರುವ ಬೈಂದೂರು, ಕುಂದಾಪುರದವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.
ಬೈಂದೂರು : ಇಸ್ರೇಲ್ ನಲ್ಲಿರುವ ಬೈಂದೂರು ಜನರಿಗೆ ಫೋನ್ ಮೂಲಕ ಧೈರ್ಯ ತುಂಬಿದ ಶಾಸಕ ಗುರುರಾಜ್ ಗಂಟಿಹೊಳೆ
