Saturday, July 27, 2024
Homeಸುದ್ದಿಕರಾವಳಿತೀರ್ಥಳ್ಳಿ ಜನರ ನಿದ್ದೆಗೆಡಿಸಿದೆ ಈ ಫ್ಯಾಮಿಲಿಯ ನಿಗೂಢ ಸಾವು ; ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ

ತೀರ್ಥಳ್ಳಿ ಜನರ ನಿದ್ದೆಗೆಡಿಸಿದೆ ಈ ಫ್ಯಾಮಿಲಿಯ ನಿಗೂಢ ಸಾವು ; ಬಗೆದಷ್ಟು ಹೆಚ್ಚುತ್ತಿದೆ ಅನುಮಾನಗಳ ಸಾಗರ

ಶಿವಮೊಗ್ಗ : ದಿನನಿತ್ಯ ದೇವರಿಗೆ ಪೂಜಿಸುವ ಆ ಒಂದು ಅರ್ಚಕನ ಕುಟುಂಬಕ್ಕೆ ಆ ದೇವರೇ ಕರುಣೆ ತೋರಲಿಲ್ಲ ಎಂಬ ಮೂಕ ರೋದನೆ, ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಮನೆಯಲ್ಲಿ ಕಾಣಿಸಿದೆ. ದೇವರ ಮುಂದೆ ಬೆಳಗಬೇಕಿದ್ದ ಆರತಿಯ ಬೆಂಕಿ, ಆ ಮನೆಯ ಕುಟುಂಬವನ್ನೇ ದಹಿಸಿಬಿಟ್ಟಿದೆ. ಒಂದೇ ಮನೆಯ ಮೂವರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಮನಕಲುಕಿ ಬಿಸಾಕಿದೆ. ಧಗಧಗಿಸಿ ಹೋಗಿದ್ದ ಬೆಂಕಿಯ ಕೆಂಡದಲ್ಲಿ ಮಾಂಸದ ಮುದ್ದೆಯಾಗಿ ಬಿದ್ದಿದ ದೇಹಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ.

ಜೋಗದ ಸಿರಿ ಬೆಳಕಂತಿರುವ ತೀರ್ಥಹಳ್ಳಿಯ ಒಂದು ಕುಟುಂಬದಲ್ಲಿ ಮಾತ್ರ ಕಗ್ಗತ್ತಲು ಆವರಿಸಿದೆ. ಇಬ್ಬರು ಗಂಡು ಮಕ್ಕಳು. ಒಳ್ಳೆಯ ವ್ಯವಸಾಯ. ಅಡಿಕೆ ವ್ಯಾಪಾರ. ಎಲ್ಲವೂ ಚನ್ನಾಗೇ ಇತ್ತು. ಆದ್ರೆ ದೇಹವನ್ನ ಸುಟ್ಟುಕೊಂಡರೂ ಕರಗದಂತ ನೋವು ಆ ಕುಟುಂಬಕ್ಕೇ ಏನಿತ್ತು ಅನ್ನೋ ನೋವಿನ ಪ್ರಶ್ನೆ ಆ ಊರಿನ ಜನರದ್ದು. ಹಚ್ಚ ಹಸಿರ ಈ ವಾತಾವರಣ ತಂಪಾಗಿ ಸುರಿದ ಮಳೆಯ ಪ್ರತಿರೂಪ. ಆದ್ರೆ ಇದೇ ಹಸಿರಿನ ನಡುವೆ ಮನೆ ಮಾಡಿಕೊಂಡು ಮಡದಿ ಮಕ್ಕಳ ಜೊತೆ ಸಂಸಾರದ ಗೂಡು ಕಟ್ಟಿಕೊಂಡ ಆ ಅರ್ಚಕರಿಗೆ ಅದೆಂಥ ಕಷ್ಟ ಬಂದೊದಗಿತ್ತೋ ಗೊತ್ತಿಲ್ಲ. ಅಡಿಕೆ ಬೇಯಿಸಲು ಉಪಯೋಗಿಸುವ ಸೌದೆಗಳನ್ನ ಮೈ ಮೇಲೆ ಹಾಕಿಕೊಂಡು. ಇಡೀ ಕುಟುಂಬವನ್ನೇ ಬೆಂಕಿಗೆ ಆಹುತಿಯಾಗಿದ್ದಾರೆ.

ಸೌದೆ ಕೆಂಡದ ನಡುವೆ ಮಾಂಸದ ಮುದ್ದೆಯಂತೆ ಮೃತದೇಹ ಪತ್ತೆ

ಇದು ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ. ಶಿವಮೊಗ್ಗದ ತೀರ್ಥಹಳ್ಳಿಯ ಅರಳಸುರಳಿಯಲ್ಲಿ ಈ ದುರ್ಘಟನೆ ನಡೆದು ಹೋಗಿದೆ. ಎಲ್ಲಾ ಚೆನ್ನಾಗಿದ್ದ ಫ್ಯಾಮಿಲಿಗೆ ಏನಾಯ್ತು ಅನ್ನೋ ಆತಂಕ ಆಪ್ತರ ಮುಖದಲ್ಲಿ ಎದ್ದು ಕಾಣ್ತಿತ್ತು. ಈ ಮೃತ್ಯುಯಾಗವನ್ನ ನೋಡಿದ ಮೇಲೆ ಯಾರಿಗಾದ್ರೂ ಮೊದಲಿಗೆ ಅನಿಸೋದು ಆತ್ಮಹತ್ಯೆನಾ ಅಥವಾ ಕೊಲೆನಾ ಅನ್ನೋದು. ಯಾಕಂದ್ರೆ ಈ ಘಟನೆಯ ಹಿಂದೆ ಹಲವು ಸಂಶಯಗಳು ಹುಟ್ಕೊಂಡಿವೆ..ಆ ಸಂಶಯಗಳಿಗಾಗಿ ಪೊಲೀಸರು ಈಗಾಗಲೇ ಜಾಲಾಟ ನಡೆಸ್ತಿದಾರೆ.

ಇಷ್ಟು ಭಯಾನಕವಾಗಿ ಅಗ್ನಿ ಗಾಹುತಿಯಾಗುವ ಸ್ಥಿತಿ ಆ ಕುಟುಂಬಕ್ಕೆ ಯಾಕೆ ಬಂತು? ಯಾರಿಗೂ ಹೇಳಿಕೊಳ್ಳಲಾಗದ ನೋವು ಅವರಲ್ಲಿ ಇದ್ದಿರಬಹುದು. ಸಾವೇ ಪರಿಹಾರ ಎನ್ನುವಂತ ನೋವು ಆ ಕುಟುಂಬವನ್ನ ಒಳಗೊಳಗೆ ದಹಿಸಿ ಹಾಕಿರ್ಬೋದು. ಆದ್ರೆ ಈ ದಿನ ಅವರ ಮನಸಿನ ಜೊತೆ ದೇಹವನ್ನೂ ದಹಿಸಿ ಹಾಕಿದೆ. ಇಬ್ಬರು ಮಕ್ಕಳಿದ್ದರೂ ಬಗೆಹರಿಯದಂತ ಆ ಸಮಸ್ಯೆ ಏನಿರ್ಬೋದು? ಸಾವೊಂದು ದಾರಿಯಂತೆ ಆ ಕುಟುಂಬಕ್ಕೆ ಅನಿಸಿದ್ಯಾಕೆ? ಯೋಚಿಸುತ್ತಾ ಹೋದಂತೆ ನೂರಾರು ಸಂಶಯಗಳು ತಳುಕು ಹಾಕಿಕೊಳ್ತವೆ. ಆದ್ರೆ, ಈ ಘಟನೆ ಮಾತ್ರ ಇಡೀ ಗ್ರಾಮವನ್ನೇ ಕಂಗೆಡಿಸಿರೋದು ಸತ್ಯ.

ಕೆಕೋಡ್ ಕುಟುಂಬ ಸಾವಿಗೆ ಸಾಲದ ಹೊರೆಯೇ ಕಾರಣಾನಾ?

ಇದು ಕಲ್ಲೋಣಿ ಮಹಾಗಣಪತಿ ದೇಗುಲದ ಹೆಬ್ಬಾಗಿಲು. ಇಲ್ಲೇ ರಾಘವೇಂದ್ರ ಕೆಕೋಡ್ ಹಿರಿಯ ಅರ್ಚಕರಾಗಿ ಕೆಲಸ ಮಾಡಿದ್ದರು. ಒಳ್ಳೆಯ ಅಡಿಕೆ ವ್ಯಾಪಾರ ಮಾಡುವ ಫ್ಯಾಮಿಲಿ ಇದು. ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಗಳಿಸಿರುವ ಫ್ಯಾಮಿಲಿ ಕೂಡ. ರಾಘವೇಂದ್ರ ಕೆಕೋಡ್ ನಾಗರತ್ನ ಎಂಬುವವರನ್ನ ಮದುವೆಯಾಗಿದ್ದರು. ಇವರಿಗೆ ಶ್ರೀರಾಮ್ ಮತ್ತು ಭರತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲಾ ಚನ್ನಾಗೇ ಇದೆ. ಹ್ಯಾಪಿ ಫ್ಯಾಮಿಲಿ ಅನ್ನೋ ಹಾಗೆ ಬದುಕಿದ ದಿನಗಳಿವೆ. ಆದರೆ ಇದ್ದಕ್ಕಿದಂತೆ. ರಾಘವೇಂದ್ರ ಕೆಕೋಡ್, ಪತ್ನಿ ನಾಗರತ್ನ ಹಾಗೂ ಪುತ್ರ ಶ್ರೀರಾಮ್ ಬೆಂಕಿಗೆ ಆಹುತಿಯಾಗಿದ್ದಾರೆ. ಕುಟುಂಬದಲ್ಲಿನ ಮೂರು ಜನ ಸೌದೆಯಲ್ಲಿ ಉರಿದು ಬೆಂದು ಹೋಗಿದ್ದಾರೆ.

ಸೂರ್ಯ ಆಕಾಶಕ್ಕೆ ಬೆಳಕನ್ನ ಚಿಮ್ಮುವ ಮೊದಲೇ ಬೆಳಗ್ಗೆ 6 ರಿಂದ 6.30ರ ಸುಮಾರಿಗೆ ಅರ್ಚಕರ ಮನೆಯಲ್ಲಿ ದೇಹಾಹುತಿಯಾಗಿ ಹೋಗಿದೆ. ಆದ್ರೆ ಇಲ್ಲಿ ಉಳಿದಿದ್ದು ಕೊನೆ ಮಗ ಭರತ್ ಮಾತ್ರ. ಆದ್ರೆ ಆತ ಕೂಡ ಶೇ.40 ರಿಂದ 50ರಷ್ಟು ಸುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಆತಂಕಕ್ಕೆ ಒಳಗಾಗಿಸಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಸಮಗ್ರ ತನಿಖೆ ಬಳಿಕ ಹೊರಬರಲಿದೆ. ಭರತ್ ಕೊಡುವ ಸ್ಟೇಟ್ಮೆಂಟ್ನಿಂದ ಮತ್ತಷ್ಟು ವಿಚಾರಗಳು ತಿಳಿದು ಬರುವ ಸಾಧ್ಯತೆಗಳಿವೆ.

ಮನೆಯೊಳಗೇನೇ ಸೌದೆ ತುಂಬಿ ಬೆಂಕಿ ಹಚ್ಚಿಕೊಂಡ್ರಾ..!? ಕೆಕೋಡ್ ಫ್ಯಾಮಿಲಿ ಸಾವು ಕೊಲೆಯೋ? ಆತ್ಮಹತ್ಯೆಯೋ?

ಒಂದು ರೂಮಲ್ಲಿ ಸೌದೆಗಳನ್ನ, ಮನೆಯಲಿದ್ದ ಸಾಮಾನುಗಳನ್ನ ಗುಡ್ಡೆ ಹಾಕಿ, ಅದರ ಮೇಲೆ ಮಲಗಿ ಅದಕ್ಕೆ ಬೆಂಕಿ ಹಚ್ಚಿಕೊಂಡು ಇಡೀ ಕುಟುಂಬ ಆತ್ಕಹತ್ಯೆ ಪ್ರಯತ್ನದಲ್ಲಿ ಸುಟ್ಟು ಕರಕಲಾಗಿದ್ದಾರೆ. ಈ ಸಮಯದಲ್ಲಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಮಾಜಿ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಅವ್ರು ಕೂಡ ಆತಂಕದ ಜೊತೆ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಟೀಮ್ ಜೊತೆಗೆ ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ವಾಡ್ ಆಗಮಿಸಿ ಮಾಹಿತಿ ಕಲೆ ಹಾಕ್ತಿದೆ. ಮೂವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಆದಷ್ಟು ಬೇಗನೇ ತನಿಖೆಯಿಂದ ಹೊರಬೀಳಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News