Wednesday, May 22, 2024
Homeಸುದ್ದಿ14-15ನೇ ಶತಮಾನದ ಶಾಸನಗಳಲ್ಲಿ ಉಡುಪಿ ಕಂಗೂರು ಮಠದ ಬಗ್ಗೆ ಉಲ್ಲೇಖ

14-15ನೇ ಶತಮಾನದ ಶಾಸನಗಳಲ್ಲಿ ಉಡುಪಿ ಕಂಗೂರು ಮಠದ ಬಗ್ಗೆ ಉಲ್ಲೇಖ

ಉಡುಪಿ ಅ.10: ಆದಿ ಉಡುಪಿ ಕಂಗಣಬೆಟ್ಟು ಕಂಗೂರು ಗೋಪಿನಾಥ ಮಠದಲ್ಲಿ ದೊರೆತ 14-15ನೇ ಶಾಸನಗಳನ್ನು ತಜ್ಞರ ತಂಡವು ಇತ್ತೀಚೆಗೆ ಪುನರ್ ಪರಿಶೀಲಿಸಿದೆ. ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಅವರ ನೇತೃತ್ವದಲ್ಲಿ, ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಎಸ್‌ಎ ಕೃಷ್ಣಯ್ಯ ಮತ್ತು ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಉಪನ್ಯಾಸಕ ಶ್ರುತೇಶ್ ಆಚಾರ್ಯ ಅವರು ಅಧ್ಯಯನ ನಡೆಸಿದರು. ಈ ಹಿಂದೆ ಸಂಶೋಧಕರು ಈ ಶಾಸನಗಳ ಬಗ್ಗೆ ಅಧ್ಯಯನ ನಡೆಸಿದ್ದರೂ, ಅವರು ವಿವರಗಳನ್ನು ಪ್ರಕಟಿಸಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಶಾಸನಗಳ ಮರು ಪರಿಶೀಲನೆ ಅಗತ್ಯ ಎಂದು ಸಂಶೋಧಕರು ತಿಳಿಸಿದ್ದಾರೆ.

ಸುಮಾರು 14 ರಿಂದ 15 ನೇ ಶತಮಾನದ ವಿಜಯನಗರ ಕಾಲದ ನಾಲ್ಕು ಶಾಸನಗಳ ಸಂಪೂರ್ಣ ಪರೀಕ್ಷೆಯನ್ನು ನಡೆಸಿದ್ದೇವೆ. ಅವುಗಳಲ್ಲಿ ಎರಡು ಶಾಸನಗಳು ಇಮ್ಮಡಿ ಹರಿಹರನದ್ದು, ಒಂದು ಇಮ್ಮಡಿ ದೇವರಾಯನದ್ದು ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಒಂದು ಶಾಸನದ ಲಿಪಿಯು ಸಂಪೂರ್ಣವಾಗಿ ಸವೆದುಹೋಗಿದೆ. ನಮ್ಮ ಅಧ್ಯಯನದ ಆಧಾರದ ಮೇಲೆ ನಾವು ಈ ಶಾಸನಗಳನ್ನು 14 ನೇ ಶತಮಾನ ಕಾಲದ್ದು ಅಂತ ವಿಶ್ವಾಸದಿಂದ ನಿರ್ಧರಿಸಬಹುದು ಎಂದು ಶ್ರುತೇಶ್ ಆಚಾರ್ಯ ಹೇಳಿದರು.

ಇದನ್ನೂ ಓದಿ: ಹಾವೇರಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ಶಾಸನಗಳನ್ನು ಗ್ರಾನೈಟ್ ಕಲ್ಲುಗಳ ಮೇಲೆ ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಶಂಖ, ಚಕ್ರ, ರಾಜಕತಿ, ಬ್ರಾಹ್ಮಣ ಯುವಕ (ವಟು) ಮತ್ತು ದೀಪದ ಚಿತ್ರಣಗಳನ್ನು ಗಮನಿಸಬಹುದು. ಬೊಮ್ಮರಸ ಮತ್ತು ಬಾರ್ಕೂರಿನ ಚಂದ್ರರಸ ಆಳ್ವಿಕೆಯಲ್ಲಿ ಭೂಮಿಯನ್ನು ಧಾನದ ಬಗ್ಗೆ ಈ ಶಾಸನಗಳಲ್ಲಿ ಉಲ್ಲೇಖವಾಗಿದೆ. ಕಂಗು ಮಠ (ಕಂಗೂರು ಮಠ)ದಲ್ಲಿನ ನಾರಾಯಣ, ರಾಮಚಂದ್ರ, ಗೋಪಿನಾಥ ಮತ್ತು ವಿಠಲ ದೇವತೆಗಳಿಗೆ ಕಾಣಿಕೆ ನೀಡಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಇಮ್ಮಡಿ ದೇವರಾಯನ ಎರಡು ಶಾಸನಗಳನ್ನು ಒಂದೇ ಕಲ್ಲಿನ ಮೇಲೆ ಕೆತ್ತಲಾಗಿದೆ. ಮುಖ್ಯವಾಗಿ ಪುಣ್ಯಕೀರ್ತಿ ತೀರ್ಥರು ಶ್ರೀರಾಮನನ್ನು ಆರಾಧಿಸುತ್ತಿದ್ದರು ಮತ್ತು ಈ ಸ್ಥಳದಲ್ಲಿ ದೇವರ ಉತ್ಸವದ ಆಚರಣೆಗಾಗಿ ಮಾಡಿದ 100 ಹೊನ್ನುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಶಾಸನದ ಆಧಾರದ ಮೇಲೆ ಮಠಕ್ಕೆ 14-15 ಶತಮಾನದಷ್ಟು ಇತಿಹಾಸವಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಇತಿಹಾಸಕಾರ ಪಾದೂರು ಗುರುರಾಜ ಭಟ್ ಅವರ ಪ್ರಕಾರ, ಮಠದ ವಿಗ್ರಹವು 8 ನೇ ಶತಮಾನದ್ದಾಗಿದೆ.

ಪ್ರಸ್ತುತ, ಎಲ್ಲಾ ಶಾಸನಗಳನ್ನು ಮಠದ ಆವರಣದಲ್ಲಿ ಉತ್ತಮವಾಗಿ ಸಂರಕ್ಷಿಸಲಾಗಿದೆ. ಶಾಸನವನ್ನು ಸಂರಕ್ಷಿಸಲು ಆಡಳಿತ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದು ಶ್ರುತೇಶ್ ಹೇಳಿದರು. ಮೋಹನ್ ಉಪಾಧ್ಯ, ಶಾಂತಾರಾಮ ಭಟ್, ಶ್ರೀಶ ಭಟ್ ಕೊಡವೂರು ಹಾಗೂ ಸ್ಥಳೀಯರು ಸಂಶೋಧನಾ ತಂಡಕ್ಕೆ ನೆರವಾದರು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News