Saturday, July 27, 2024
Homeಸುದ್ದಿಹೆಬ್ರಿ: ಅಪರಿಚಿತ ವಾಹನ ಡಿಕ್ಕಿ; ಚಿರತೆ ಸಾವು

ಹೆಬ್ರಿ: ಅಪರಿಚಿತ ವಾಹನ ಡಿಕ್ಕಿ; ಚಿರತೆ ಸಾವು

ಉಡುಪಿ, ಅ.07: ಅಪರಿಚಿತ ಘನ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ನಡೆದಿದೆ.

ಕಾಡಿನಿಂದ ರಸ್ತೆ ದಾಟುತ್ತಿದ್ದ ಸುಮಾರು ಐದು ವರ್ಷದ ಹೆಣ್ಣು ಚಿರತೆಯ ತಲೆಯ ಭಾಗಕ್ಕೆ ವಾಹನ ಡಿಕ್ಕಿಯಾಗಿದೆ. ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನ ಕೂಡಾ ಪತ್ತೆಯಾಗಿಲ್ಲ.

ಘಟನಾ ಸ್ಥಳಕ್ಕೆ ಹೆಬ್ರಿ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News