ತುಮಕೂರು : ಒಂದೇ ವೇಲ್ ಬಿಗಿದುಕೊಂಡು ಪತಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ.
ಮನು (26) ಪವಿತ್ರ (24) ಪ್ರಾಣ ಕಳೆದುಕೊಂಡವರು.
ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರೊಪ್ಪ ಗ್ರಾಮದಲ್ಲಿ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂರು ವರ್ಷದ ಹಿಂದೆ ಈ ದಂಪತಿ ಮದುವೆಯಾಗಿತ್ತು.
ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇವರಿಬ್ಬರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗಿವೆ. ಒಂದೇ ವೇಲ್ ಮೂಲಕ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಯಾರಾದರೂ ಕೊಲೆ ಮಾಡಿ ನೇಣು ಬಿಗಿದರೆ ಎಂಬ ಪ್ರಶ್ನೆ ಸಂಬಂಧಿಕರಲ್ಲಿ ಮೂಡಿದೆ. ಮಕ್ಕಳ ಮೃತದೇಹ ಕಂಡು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.