Saturday, July 27, 2024
Homeಸುದ್ದಿಕರಾವಳಿಹಿಂದೂ ಧಾರ್ಮಿಕ ಕಟ್ಟೆಯಲ್ಲಿ ನೆಟ್ಟ ಇಸ್ಲಾಂ ಧ್ವಜ ತೆರವು ಮಾಡಿದ ಪೊಲೀಸರು..!!

ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ನೆಟ್ಟ ಇಸ್ಲಾಂ ಧ್ವಜ ತೆರವು ಮಾಡಿದ ಪೊಲೀಸರು..!!

ಮಂಗಳೂರು : ಮೂಡುಬಿದಿರೆ ತಾಲೂಕಿನ‌ ಪುಚ್ಚೆಮುಗೇರು ಗ್ರಾಮದಲ್ಲಿ ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ನೆಟ್ಟ ಘಟನೆ ನಡೆದಿದೆ.



ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ.

ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಎಂಬುವವರು ಪಂಚಾಯತ್ ಅನುಮತಿ ಪಡೆಯದೆ ಹಾಕಿರುವ ಧ್ವಜ ಇದಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಪಿಡಿಒ ಕರ್ತವ್ಯದ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಮ್ಮ ಮೇಲೆ ಕೇಸ್ ಹಾಕೋದಾಗಿ ಎಚ್ಚರಿಸಿದ್ದಾರೆ.

ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಧ್ವಜ ಕಾರಣವಾಗುತ್ತಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಪ್ರಕರಣ ತಿಳಿಯಾಗಿದೆ. ಧ್ವಜ ನೆಟ್ಟವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News