Saturday, July 27, 2024
Homeಸುದ್ದಿಕರಾವಳಿಭಾರತೀಯ ಸಾಂಸ್ಕೃತಿಕ ಪರಂಪರೆ ಮತ್ತು ಜ್ಞಾನ ಪರಂಪರೆ ತಿಳಿದುಕೊಳ್ಳಲು UTIKS ನ ಆನ್‌ಲೈನ್ ಪೋರ್ಟಲ್

ಭಾರತೀಯ ಸಾಂಸ್ಕೃತಿಕ ಪರಂಪರೆ ಮತ್ತು ಜ್ಞಾನ ಪರಂಪರೆ ತಿಳಿದುಕೊಳ್ಳಲು UTIKS ನ ಆನ್‌ಲೈನ್ ಪೋರ್ಟಲ್

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (MAHI) ಮಂಗಳೂರಿನ ಇಂಡಿಯನ ಕೌನ್ಸಿಲ್ ಫಾರ್ ಕಲ್ಚರಲ್, ರಿಲೇಶನ್ (ICC) .ಮತ್ತು ಸಾವಿತ್ರಿಬಾಯಿ ಪುಲೆ ಪುಣೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ “ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಸಾರ್ವತ್ರಿಕೀಕರಣ (ITS) ಆನ್‌ಲೈನ್ ವೇದಿಕೆಯ ಬಿಡುಗಡೆ ಸಮಾರಂಭವು ಇಂದು ನಡೆಯಿತು.

UTIKS ವೋರ್ಟಲ್ ಅನ್ನು ICCR ನ ಗೌರವಾನ್ವಿತ ಅಧ್ಯಕ್ಷರಾದ ಡಾ. ವಿನಯ್ ಸಹಸ್ರಬುದ್ಧ ಅವರು ಉದ್ಘಾಟಿಸಿದರು, ICCR ಮಹಾನಿರ್ದೇಶಕ ಶ್ರೀ ಕುಮಾರ್ ತುಹಿನ್, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ನಾರಾಯಣ್ ಸಭಾಹಿತ್, ಕರ್ನಾಟಕ ರಾಜ್ಯ ಸರ್ಕಾರದ ಗಣ್ಯರು ಮತ್ತು ಅಧಿಕಾರಿಗಳು ಮತ್ತು ಮಾಹೆಯ  ವಿದ್ಯಾರ್ಥಿಗಳು‌ ಉಪಸ್ಥಿತರಿದ್ದರು.

ಭಾರತದ  ಪುರಾತನ ಶಿಲ್ಪಕಲೆ ಮತ್ತು ಪಾಕಶಾಸ್ತ್ರ, ಉಡುಗೆ ತೊಡುಗೆಗಳ ಮಾಹಿತಿ, ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆಯ ಅಡಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಪರಿಚಯಾತ್ಮಕ ಮಟ್ಟದ ಅಲ್ಪಾವಧಿಯ ಅಧ್ಯಯನದ ಕೋರ್ಸ್‌‌ ಮತ್ತು ಪೋರ್ಟಲ್‌ ಭಾರತೀಯ ಸಂಸ್ಕೃತಿಯ ಬಗ್ಗೆ, ಜ್ಞಾನ ಮತ್ತು ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವ ಉದ್ದೇಶವನ್ನು  UTIKS ವೋರ್ಟಲ್ ಹೊಂದಿದೆ.

ಪ್ರತಿ UTIKS ಸಂಚಿಕೆಯಲ್ಲಿ ಸಂಘಟಿತ ದೃಶ್ಯ ಮತ್ತು ಧ್ವನಿ ಮುದ್ರಿತ ಚಿತ್ರಗಳು, ಸಂದರ್ಶನಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡಂತೆ 30-ನಿಮಿಷಗಳ ವೀಡಿಯೊ ವಿಭಾಗವನ್ನು ಒಳಗೊಂಡಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News