Wednesday, April 24, 2024
Homeಸುದ್ದಿಕೇರಳದ ವಿಷ್ಣುಮಾಯಾ ದೇವಸ್ಥಾನದ ಪೂಜಾರಿಗಳಿಂದ ನಟಿ ಖುಷ್ಬೂಗೆ ಪಾದ ಪೂಜೆ; ಏನಿದು ನಾರಿ ಪೂಜೆಯ ವಿಶೇಷ..?

ಕೇರಳದ ವಿಷ್ಣುಮಾಯಾ ದೇವಸ್ಥಾನದ ಪೂಜಾರಿಗಳಿಂದ ನಟಿ ಖುಷ್ಬೂಗೆ ಪಾದ ಪೂಜೆ; ಏನಿದು ನಾರಿ ಪೂಜೆಯ ವಿಶೇಷ..?

ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರಿಗೆ ನಾರಿ ಪೂಜೆ ನೆರವೇರಿಸಲಾಗಿದೆ. ಈ ಎಲ್ಲ ಪೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಏನು ಈ ನಾರಿ ಪೂಜೆಯ ವಿಶೇಷ?

ಈ ದೇವಸ್ಥಾನದ ಆಚರಣೆಗಳ ಪ್ರಕಾರ ಪ್ರತಿ ವರ್ಷ ಒಬ್ಬ ಮಹಿಳೆಯನ್ನು ಆಮಂತ್ರಿಸಿ ಶಾಸ್ತ್ರೋಕ್ತವಾಗಿ ಪಾದಪೂಜೆ ಮಾಡಿ ವಿಧಿವಿಧಾನಗಳಂತೆ ಪೂಜೆ ನೆರವೇರಿಸಲಾಗುತ್ತದೆ. ಪೂಜಾರಿಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಈ ದೇವಸ್ಥಾನದ ವಿಶೇಷ. ಪೂಜೆಯ ವೇಲೆ ಖುಷ್ಬೂ ಅವರ ಪಾದಗಳಿಗೆ ಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.

ಸ್ವರ್ಗದಿಂದಲೇ ದೇವತೆ ಬಂದು ಪಾದಪೂಜೆ ಮಾಡಿಸಿಕೊಳ್ಳುತ್ತಾಳೆ ಎಂದು ನಾರಿ ಪೂಜೆ ಬಗೆಗೆ ದೇವಸ್ಥಾನದ ಪೂಜಾರಿಗಳ ನಂಬುಗೆಯಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News