Sunday, May 26, 2024
Homeಸುದ್ದಿರಾಜ್ಯಭಾರತೀಯ ಪಾಕಪದ್ದತಿ ಮತ್ತು ಆಹಾರ ಸಂಸ್ಕೃತಿಯ ಕೇಂದ್ರವನ್ನು ಉದ್ಘಾಟಿಸಿದ ಶೆಫ್ ವಿಕಾಸ್ ಖನ್ನಾ

ಭಾರತೀಯ ಪಾಕಪದ್ದತಿ ಮತ್ತು ಆಹಾರ ಸಂಸ್ಕೃತಿಯ ಕೇಂದ್ರವನ್ನು ಉದ್ಘಾಟಿಸಿದ ಶೆಫ್ ವಿಕಾಸ್ ಖನ್ನಾಮಣಿಪಾಲ : ಭಾರತವು ಬಹು ಸಂಸ್ಕೃತಿ ಮತ್ತು ಪರಂಪರೆಯ ದೇಶವಾಗಿದೆ. ಭಾರತೀಯ ಪಾಕ ಪದ್ದತಿಯು ಇದರ ಅವಿಭಾಜ್ಯ ಅಂಗವೇ ಆಗಿದೆ. ವಿಷ್ಠು ಪುರಾಣದಲ್ಲಿ ಉಕ್ತವಾಗಿರುವ ‘ಉತ್ತರಮ್‌ ಯತ್‌ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ, ವರ್ಷಂ ತದ್‌ ಭಾರತಮ್‌ ನಮಭಾರತೀಯತ್ರ ಸಂತತಿಃ’ ಅಂದರೆ, ಸಾಗರದಿಂದ ಉತ್ತರದವರೆಗೆ, ಹಿಮವತ್ಪರ್ವತದಿಂದ ದಕ್ಷಿಣದವರೆಗೆ ಹರಡಿರುವ ಭೂಭಾಗವೇ ಭವ್ಯವಾದ ಭಾರತ, ಅಲ್ಲಿರುವವರೇ ಭಾರತೀಯರು – ಈ ಸಾಲು ಭಾರತೀಯ ಪರಂಪರೆಯ ಅಗಾಧತೆಯನ್ನು ಪ್ರತಿಫಲಿಸುವಂತಿದೆ.ಭವ್ಯವಾದ ಹಿಮಾಲಯ ಶಿಖರಗಳಿಂದ ದಕ್ಷಿಣದ ದಟ್ಟವಾದ ಮಳೆಕಾಡುಗಳವರೆಗೆ ಸುಮಾರು 32,87,263 ಚದರ ಕಿ. ಮೀ. ವಿಸ್ತೀರ್ಣ ಹರಡಿರುವ ಭೂಭಾಗವು ಸಮೃದ್ಧವಾದ ಸಾಮ್ರಾಜ್ಯ, ಪರಾಕ್ರಮಿಗಳಾದ ರಾಜರು ಮತ್ತು ಸುಂದರವಾದ ಇತಿಹಾಸವನ್ನು ಒಳಗೊಂಡಿದೆ. ಭಾರತದಲ್ಲಿ “ನಮ್ಮ ಆಹಾರ ನಾವು ಯಾರು” ಎಂಬುದನ್ನು ಸೂಚಿಸುತ್ತದೆ . ಭಾರತೀಯ ಪಾಕಪದ್ಧತಿ ಒಂದು ಕಲಾಕೃತಿ ಇದ್ದಂತೆ. ಭಾರತದಲ್ಲಿ ಬೆಳೆಯುವ ಸಂಬಾರಪದಾರ್ಥಗಳು, ಅಕ್ಕಿ, ಜೋಳ ಸೇರಿದಂತೆ ಆಹಾರಧಾನ್ಯಗಳು, ವೈವಿಧ್ಯಮಯವಾದ ತರಕಾರಿ-ಹಣ್ಣುಹಂಪಲುಗಳು- ಹೀಗೆ ವರ್ಣವೈವಿಧ್ಯಗಳು ಪಾಕವೆಂಬ ಕಲಾಕೃತಿಯ ಸೌಂದರ್ಯವನ್ನು ಹೆಚ್ಚಿಸಿವೆ.

ವೆಲ್‌ ಕಮ್‌ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (WGSHA), ಡಾ. ಟಿಎಂಎ ಪೈ ಫೌಂಡೇಶನ್‌ನ ಘಟಕವಾದ ಮಾಹೆ ಮಣಿಪಾಲದ ಅಂಗ ಸಂಸ್ಥೆಯಾಗಿದೆ. 1987 ರಿಂದ ಯುವ ವ್ಯಕ್ತಿಗಳನ್ನು ಆತಿಥ್ಯ ಉದ್ಯಮದಲ್ಲಿ ಸಮರ್ಥ ವೃತ್ತಿಪರರನ್ನಾಗಿ ರೂಪಿಸುವಲ್ಲಿ ಪ್ರವರ್ತಕವಾಗಿದೆ. ಐಟಿಸಿ ಲಿಮಿಟೆಡ್ ನ ಸಹಭಾಗಿತ್ವದಲ್ಲಿ ವೆಲ್ ಕಮ್ ಗ್ರೂಪ್ ನ ಹೋಟೆಲ್ ವಾಗ್ಷ (WGSHA) ವಿಭಾಗವು ಸತತವಾಗಿ ಆತಿಥ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಹೊಂದಿದ್ದು, ಆತಿಥ್ಯ ಅಧ್ಯಯನಕ್ಕಾಗಿ ಭಾರತದಲ್ಲಿ ನಂಬರ್ 1 ಶ್ರೇಣಿಯನ್ನು ಗಳಿಸಿದೆ.

‘ಭಾರತೀಯ ಪಾಕ ಮತ್ತು ಆಹಾರ ಸಂಸ್ಕೃತಿಯ ಕೇಂದ್ರ’ವಾಗುವ ಮೂಲಕ ವಾಗ್ಷವು ಭಾರತೀಯ ಪಾಕಸಂಸ್ಕೃತಿಯಲ್ಲಿ ಜಾಗತಿಕ ಪಾಕನಕ್ಷೆಯಲ್ಲಿ ಎದ್ದು ಕಾಣಿಸುವ ಉದ್ದೇಶದಲ್ಲಿ ಕಾರ್ಯನಿರತವಾಗಿದೆ. ಭಾರತೀಯ ಪಾಕಸಂಸ್ಕೃತಿ ಸಾಂಪ್ರದಾಯಿಕ ತಿಳುವಳಿಕೆಯಿಂದಾಚೆಗೆ ಕೇಂದ್ರವು ಭಾರತದಲ್ಲಿರುವ ಸ್ಥೂಲ ಮತ್ತು ಸೂಕ್ಷ್ಮ ಪಾಕಪದ್ಥತಿಯ ಜಟಿಲತೆಗಳ ಬಗ್ಗೆ ಆಳವಾಗಿ ಗಮನಹರಿಸುತ್ತದೆ. ಭಾರತೀಯ ಆಹಾರಕ್ರಮದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ತ್ವದ ಬಗ್ಗೆ ಆಳವಾದ ಅಧ್ಯಯನವನ್ನು ಸಾಧ್ಯವಾಗಿಸುವ ಉದ್ದೇಶದಿಂದ ವಾಗ್ಷವು 2021ರಲ್ಲಿ ಭಾರತೀಯ ಪಾಕಪದ್ಧತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಿತು.

ಭಾರತೀಯ ಪಾಕಪದ್ಧತಿ ಮತ್ತು ಆಹಾರಸಂಸ್ಕೃತಿಯ ಕೇಂದ್ರವು ಭಾರತೀಯ ಆಹಾರ, ಇತಿಹಾಸ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಬಂಧದ ಅರಿವನ್ನು ಮೂಡಿಸುವ ಪ್ರಯತ್ನ ಮಾಡುತ್ತಿದೆ’ ಎನ್ನುತ್ತಾರೆ, ವಾಗ್ಷದ ಪ್ರಾಂಶುಪಾಲ ಚೆಫ್‌ ಕೆ. ತಿರುಜ್ಞಾನಸಂಬಂಧಮ್‌. ‘ವಾಗ್ಷವು ಭಾರತೀಯ ಪಾಕಪದ್ಧತಿಯ ಇತಿಹಾಸ, ನೂರಾರು ವರ್ಷಗಳಿಂದ ಸಾಗಿ ಬಂದ ಕ್ರಮವನ್ನುನಿರೂಪಿಸುವುದರ ಜೊತೆಗೆ ಮತ್ತು ತಾಜಾ ಕೃಷಿ ಉತ್ಪನ್ನಗಳ ಬಳಕೆ ಮತ್ತು ಭಾರತೀಯ ಪಾಕಕಲೆಯ ಹಿಂದೆ ಇರುವ ವೈಜ್ಞಾನಿಕತೆಯ ಕುರಿತು ಗಮನಹರಿಸುವುದರ ಮೂಲಕ ಭಾರತೀಯ ಪಾಕಪದ್ಧತಿಯ ಶ್ರೀಮಂತ ಇತಿಹಾಸದ ಕುರಿತು ಯುವಸಮುದಾಯದಲ್ಲಿ ಅರಿವು ಮೂಡಿಸುತ್ತದೆ. ಐಟಿಸಿ ಹೊಟೇಲುಗಳು ಇಂಡಿಯನ್‌ ಪಾಕಪದ್ಧತಿಯ ಶ್ರೇಷ್ಠತೆಯನ್ನು ತಮ್ಮ ಉಪಾಹಾರಗೃಹದಲ್ಲಿ ಎತ್ತಿಹಿಡಿದಿರುವಂತೆಯೇ ಈ ಕೇಂದ್ರವು ಕೂಡ ಹೊಸ ತಿನಿಸಿನ ಕುರಿತು ಅಧ್ಯಯನ ಮಾಡಿ ಅಭಿವೃದ್ಧಿ ಪಡಿಸುತ್ತಿದೆ ಮತ್ತು ಭಾರತೀಯ ಆಹಾರ ಪರಂಪರೆಯ ಕುರಿತ ಜ್ಞಾನವನ್ನು ವಿಸ್ತರಿಸಿದೆ. ಈ ಮೂಲಕ ದೇಶ ಕಟ್ಟುವಿಕೆಯಲ್ಲಿ ಕಿರಿದಾದ ಆದರೆ, ಮಹತ್ತ್ವದ ಕೊಡುಗೆಯನ್ನು ನೀಡುತ್ತಿದೆ.

ಲಂಡನ್ನ ಮಿಶಲಿನ್ ಸ್ಟಾರ್ [Michelin-star] ಗೌರವಕ್ಕೆ ಭಾಜನರಾಗಿರುವ ವಿಕಾಸ್ ಖನ್ನ ಅವರು ಪ್ರತಿಷ್ಠಿತ ವಾಗ್ಷದ ಹಳೆ ವಿದ್ಯಾರ್ಥಿಯಾಗಿ, ಭಾರತೀಯ ಪಾಕಪದ್ಧತಿಯ ಜಾಗತಿಕ ರಾಯಭಾರಿಯಾಗಿದ್ದಾರೆ. ಭಾರತೀಯ ಪಾಕ ಪರಂಪರೆಯ ಕುರಿತ ಅವರ ಉತ್ಕಟವಾದ ಆಸಕ್ತಿ ಮತ್ತು ಈ ನೆಲದ ಪಾಕಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸುವ ಅವರ ನಿರಂತರ ಪ್ರಯತ್ನಗಳು ಅವರನ್ನು ಅವರ ಪಾಕತಜ್ಞರ ಕಣ್ಮಣಿಯನ್ನಾಗಿಸಿದೆ. ಭಾರತೀಯ ಪಾಕ ಪರಂಪರೆಯ ಸತ್ತ್ವಸಾರವನ್ನು ಎತ್ತಿ ಹಿಡಿಯುವ ಪಾಕ ಸಂಗ್ರಹಾಲಯವನ್ನು ಸ್ಥಾಪಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ. ಸುಮಾರು 15 ವರ್ಷಗಳ ನಿರಂತರ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಅವರ ಕನಸು ನನಸಾಗಿದೆ. ಪುರಾತನ ಪಾಕ ಪಾತ್ರೋಪಕರಣಗಳ ಬಗ್ಗೆ ಮತ್ತು ಅವುಗಳ ಐತಿಹಾಸಿಕ ಮಹತ್ತ್ವದ ಬಗ್ಗೆ ಅಧ್ಯಯನ ಮಾಡುವವರಿಗೆ ಈ ಸಂಗ್ರಹಾಲಯ ಮುಖ್ಯ ಸಂಪನ್ಮೂಲವಾಗಿದೆ.

ಐಟಿಸಿಯ ಜೊತೆಗಿನ ಸಹಯೋಗದಲ್ಲಿ ವಾಗ್ಷವು ಭಾರತೀಯ ಪಾಕಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಆತಿಥೇಯ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ. ಭಾರತೀಯ ಪಾರಂಪರಿಕ ಭೋಜನದ ಸ್ವಾದ ಮತ್ತು ವಿಕಾಸ್ ಖನ್ನರಂತ ಸಮರ್ಪಣ ಭಾವದ ಸಾಧಕರ ಮೂಲಕ ಭಾರತೀಯ ಪಾಕಪದ್ಧತಿಯು ಜಗತ್ತಿನಾದ್ಯಂತ ಆಹಾರ ಉತ್ಸಾಹಿಗಳನ್ನುಆಕರ್ಷಿಸುತ್ತಿದೆ ಮತ್ತು ಸಾವಿರಾರು ವರ್ಷಗಳಿಂದ ರೂಪುಗೊಂಡಿರುವ ಶ್ರೀಮಂತ ಪಾಕ ಪರಂಪರೆಯ ಸವಿಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News