Wednesday, September 18, 2024
Homeಸುದ್ದಿಕರಾವಳಿಅಷ್ಟಮಿ ವೇಳೆ ವೇಷ ಹಾಕಿ ಸಂಗ್ರಹಿಸಿದ 8 ಲಕ್ಷ ರೂ. ಅನ್ನು ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ...

ಅಷ್ಟಮಿ ವೇಳೆ ವೇಷ ಹಾಕಿ ಸಂಗ್ರಹಿಸಿದ 8 ಲಕ್ಷ ರೂ. ಅನ್ನು ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ವಿತರಿಸಿದ ರವಿ ಕಟಪಾಡಿ

ಕಾಪು : ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಅಷ್ಟಮಿ ಈ ಬಾರಿ ರವಿ ಕಟಪಾಡಿ ಸೀ ಫೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿ ಹಣ ಸಂಗ್ರಹಿಸಿದ್ದರು. ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ 5 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ 8,22,212 ರೂ. ಸಂಗ್ರಹಿಸಿದ ಮೊತ್ತವನ್ನು ವಿತರಣೆ ಮಾಡಿದ್ದಾರೆ.

ರವಿ ಕಟಪಾಡಿ ಈ ಸಂದರ್ಭ ಮಾತನಾಡಿ, ತಂಡವು ಡಬ್ಬಿಯನ್ನು ಹಿಡಿಯದೆ ಜನರ ಪ್ರೀತಿ, ವಿಶ್ವಾಸ, ನಂಬಿಕೆಯ ಮೇಲೆಗೆ ಸಂಗ್ರಹವಾಗಿರುವ ಹಣವನ್ನು ಈ ಬಾರಿ ಅನಾರೋಗ್ಯದಿಂದಿರುವ ಕಾರ್ಕಳ ಕಣಜಾರು ನಿಶ್ಮಿತಾ ಕೆ. ಅವರಿಗೆ 3ಲಕ್ಷ ರೂ., ಕುಂದಾಪುರ ಕಟ್ ಬೇಲ್ತೂರು ನಾಗೇಂದ್ರಗೆ 2 ಲಕ್ಷ 50ಸಾವಿರ, ಮಾರಣಕಟ್ಟೆ ಇಡೂರು ಸುಶಾಂತ್ ಶೆಟ್ಟಿಗೆ ಮತ್ತು ಋತಿಕ್ ಮೂಡಬಿದ್ರಿಗೆ ತಲಾ 1 ಲಕ್ಷ ರೂ., ಸಸಿಹಿತ್ಲುವಿನ ಪೂರ್ವಿಗೆ 50 ಸಾವಿರ ನೀಡಲಾಗಿದೆ. ಆ ಮೂಲಕ 9 ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು 1ಕೋಟಿ 22ಲಕ್ಷ ರೂವನ್ನು 118 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದಂತಾಗಿದೆ ಎಂದರು.

ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರರಾದ ಹರಿಶ್ಚಂದ್ರ ಪಿಲಾರು ಮತ್ತು ತುಕಾರಾಮ ಎಸ್. ಉರ್ವ ಶುಭವನ್ನು ಹಾರೈಸಿದರು.

ಈ ಸಂಧರ್ಭ ಮಹೇಶ್ ಶೆಣೈ, ಅರ್ಚಕರಾದ ಜಯಕರ ವಿ., ಪ್ರಮುಖರಾದ ಯಶವಂತ್, ಶಂಕರ್ ಕಟಪಾಡಿ, ರಾಜ್‌ಗೋಪಾಲ್, ಲಕ್ಷ್ಮಣ್, ಉಮೇಶ್ ಹಾಗೂ ರವಿ ಫ್ರೆಂಡ್ಸ್ ಕಟಪಾಡಿ‌ ತಂಡದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News