Sunday, May 26, 2024
Homeಸುದ್ದಿರಾಷ್ಟ್ರೀಯಭಾರತದ 74 ಲಕ್ಷಕ್ಕೂ ಅಧಿಕ ಅಕೌಂಟ್ ಬ್ಯಾನ್ ಮಾಡಿದ ವಾಟ್ಸ್ಆ್ಯಪ್

ಭಾರತದ 74 ಲಕ್ಷಕ್ಕೂ ಅಧಿಕ ಅಕೌಂಟ್ ಬ್ಯಾನ್ ಮಾಡಿದ ವಾಟ್ಸ್ಆ್ಯಪ್

ನವದೆಹಲಿ : ಮೆಟಾ ಒಡೆತನದ ವಾಟ್ಸ್ಆ್ಯಪ್ ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ.


ಆಗಸ್ಟ್ 01-31ರ ಅವಧಿಯಲ್ಲಿ ವಾಟ್ಸ್ಆ್ಯಪ್ ನಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದ್ದು, ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ 7,420,748 ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ.

ಇನ್ನು ಈ ಹಿಂದೆ ಜುಲೈ ತಿಂಗಳಲ್ಲಿ ಕೂಡ 72 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿಷೇಧಿಸಲಾಗಿತ್ತು.

500 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಕೇವಲ ಆಗಸ್ಟ್ ತಿಂಗಳಿನಲ್ಲಿ ಭಾರತೀಯ ಗ್ರಾಹಕರಿಂದ 14,767 ದೂರು ವರದಿಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 71 ವರದಿಗಳಿಗೆ ಪ್ರತಿಕ್ರಿಯೆಯಾಗಿ ಬ್ಯಾನ್ ಮಾಡಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News