ರೈಲ್ವೆ ಹಳಿ ಮೇಲೆ ರೀಲ್ಸ್‌; ರೈಲು ಡಿಕ್ಕಿ ಹೊಡೆದು 14 ವರ್ಷದ ಬಾಲಕ ಮೃತ್ಯು

ಲಕ್ನೋ, ಸೆ 30: ಉತ್ತರಪ್ರದೇಶದ ಬಾರಾಬಂಕಿಯಲ್ಲಿ 14 ವರ್ಷದ ಬಾಲಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್‌ ಮಾಡಲು ಮುಂದಾದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.


ಮೃತ ಬಾಲಕನನ್ನು ಫಾರ್ಮನ್‌ ಎಂದು ಗುರುತಿಸಲಾಗಿದೆ.

ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಲಕ ಸಾಯುವ ಕೊನೆ ಕ್ಷಣದ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ.

ಇನ್ನು ಬಾಲಕ ರೀಲ್ಸ್‌ ಗೆ ಫೋಸು ಕೊಡಲು ರೈಲ್ವೆ ಹಳಿ ಸಮೀಪ ಹಳಿ ಮೇಲೆ ಕಾಲಿಡುತ್ತಿದ್ದಂತೆಯೇ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

You cannot copy content from Baravanige News

Scroll to Top