ನವದೆಹಲಿ, ಸೆ.30: 2,000ರೂ. ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಗಡುವುನ್ನು ಮತ್ತೆ ವಿಸ್ತರಿಸಿದೆ.
ಈ ಹಿಂದೆ ಆರ್ ಬಿಐ ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಕೊನೆಯ ದಿನವೆಂದು ಘೋಷಿಸಿತ್ತು ಅದರಂತೆ ಹೆಚ್ಚಿನ ಗ್ರಾಹಕರು ಬ್ಯಾಂಕ್ ಗೆ ತೆರಳಿ ನೋಟು ವಿನಿಮಯ ಮಾಡಿಕೊಂಡಿದ್ದಾರೆ .
ಆದರೆ ಆರ್ ಬಿಐ ಇಂದು ಹೊಸ ಪ್ರಕಟಣೆ ಹೊರಡಿಸಿದ್ದು ನೋಟು ವಿನಿಮಯ ಮಾಡಿಕೊಳ್ಳದೆ ಬಾಕಿ ಉಳಿದಿರುವ ಗ್ರಾಹಕರು ಅಕ್ಟೋಬರ್ 7 ರವರೆಗೆ ಅವಕಾಶ ನೀಡಿದೆ.
ಗ್ರಾಹಕರು ಒಂದು ವೇಳೆ ನೋಟು ವಿನಿಮಯ ಮಾಡಿಕೊಳ್ಳದಿದ್ದಲ್ಲಿ ಬಾಕಿ ಉಳಿದಿರುವ ಏಳು ದಿನಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ