ಉಡುಪಿ, ಸೆ 30: ಭಾರತೀಯ ವೈದ್ಯಕೀಯ ಸಂಘ ಉಡುಪಿ – ಕರಾವಳಿ ಇದರ ಅಧ್ಯಕ್ಷರಾಗಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ರಾಜಲಕ್ಷ್ಮೀ ಇವರು ಅವಿರೋಧವಾಗಿ ಆಯ್ಕೆಯಾಗಿ ಅಕ್ಟೋಬರ್ 8 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಇವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ MBBS ಪದವಿಯ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಕಳೆದ 20 ವರ್ಷಗಳಿಂದ ಸಂತೆಕಟ್ಟೆಯ ವಾತ್ಸಲ್ಯ ಕ್ಲಿನಿಕ್ ಮೂಲಕ ಸ್ತ್ರೀರೋಗ ತಜ್ಞರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಜನಸಾಮಾನ್ಯರಿಗೆ ಆರೋಗ್ಯ ಮಾಹಿತಿಗಳನ್ನು ನೀಡಿ ಜಾಗೃತಿ ಮಾಡಿಸುವಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಉಪಾದ್ಯಕ್ಷರಾಗಿ ಡಾ.ನವೀನ್ ಬಲ್ಲಾಳ್, ಕಾರ್ಯದರ್ಶಿಯಾಗಿ ಡಾ.ಅರ್ಚನಾ ಭಕ್ತಾ, ಜೊತೆ ಕಾರ್ಯದರ್ಶಿಯಾಗಿ ಡಾ.ಶರತ್ ಚಂದ್ರ ರಾವ್, ಕೊಶಾಧಿಕಾರಿಯಾಗಿ ಡಾ.ಆಮ್ನಾ ಹೆಗ್ಡೆ, ಜೊತೆ ಕೊಶಾಧಿಕಾರಿಯಾಗಿ ಡಾ.ಪ್ರವೀಣ್ ಶಾಸ್ತ್ರೀ ಇವರು ಆಯ್ಕೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಾ.ವತ್ಸಲಾ ರಾವ್, ಡಾ.ವೀಣಾ ಉಮೇಶ್, ಡಾ.ಮೇಘಾ ಪೈ, ಡಾ.ಅಂಜಲಿ ಮುಂಡ್ಕೂರ್, ಡಾ.ಸಿಂಧೂರಾ ಲಕ್ಷ್ಮೀ, ಡಾ. ಗಣಪತಿ ಹೆಗ್ಡೆ, ಡಾ.ಅರುಣ್ ವರ್ಣೇಕರ್, ಡಾ.ಉಮೇಶ್ ನಾಯಕ್, ಡಾ.ಹರೀಶ್ ನಾಯಕ್, ಡಾ.ರಾಜಗೋಪಾಲ್ ಭಂಡಾರಿ, ಡಾ. ರಾಜೇಶ್ ಭಕ್ತಾ, ಡಾ.ವಾಸುದೇವ್ ಎಸ್, ಡಾ. ವೈ ಎಸ್ ರಾವ್, ಡಾ.ಸುನೀಲ್ ಮುಂಡ್ಕೂರ್, ಡಾ.ವಿಜಯಾ ವೈ.ಬಿ, ಡಾ.ಉಮೇಶ್ ಪ್ರಭು, ಡಾ.ಅಶೋಕ್ ಕುಮಾರ್ , ಡಾ.ಗೀತಾ ಪುತ್ರನ್, ಡಾ. ನರೇಂದ್ರ ಶೆಣೈ, ಡಾ. ವಿಜಯ್ ಕುಮಾರ್ ಶೇಟ್, ಡಾ.ಸನತ್ ರಾವ್, ಡಾ.ಪಿ.ವಿ ಭಂಡಾರಿ, ಡಾ.ಕೇಶವ್ ನಾಯಕ್ ಮತ್ತು ಡಾ.ದೀಪಕ್ ಮಲ್ಯ ಇವರು ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ.