Sunday, May 26, 2024
Homeಸುದ್ದಿರಾಷ್ಟ್ರೀಯಭಾರತಕ್ಕೆ ಬಂದಿಳಿದ ಪಾಕ್ ಕ್ರಿಕೆಟಿಗನಿಗೆ ಕೇಸರಿ ಶಾಲು ಹೊದಿಸಿ ಸ್ವಾಗತ..!!

ಭಾರತಕ್ಕೆ ಬಂದಿಳಿದ ಪಾಕ್ ಕ್ರಿಕೆಟಿಗನಿಗೆ ಕೇಸರಿ ಶಾಲು ಹೊದಿಸಿ ಸ್ವಾಗತ..!!

ಪಾಕಿಸ್ತಾನ ತಂಡ ವಿಶ್ವಕಪ್ನಲ್ಲಿ ಮಿಂಚಲು ಭಾರತಕ್ಕೆ ಬಂದಿಳಿದಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದ್ದಾರೆ. ಭಾರತಕ್ಕೆ ಆಗಮಿಸಿದ ಪಾಕ್ ಕ್ರಿಕೆಟಿಗರಿಗೆ ಭಾರತೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ.

2023ನೇ ವಿಶ್ವಕಪ್ನಲ್ಲಿ ಭಾಗವಹಿಸಲೆಂದು ಪಾಕ್ ಆಟಗಾರರ ಹೈದರಾಬಾದ್ಗೆ ಬಂದಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತವನ್ನು ಅವರಿಗೆ ನೀಡಲಾಗಿದೆ. ಈ ವೇಳೆ ಪಾಕ್ ನಾಯಕ ಬಾಬರ್ ಅಜಂನನ್ನು ಕಂಡು ಕೆಲವರು ಅವರ ಹೆಸರನ್ನು ಜೋರಾಗಿ ಕೂಗಿದ್ದಾರೆ.

ಇನ್ನು ಪಾಕ್ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದ್ದು, ಈ ವೇಳೆ ಕ್ರಿಕೆಟಿಗ ಆಶ್ರಫ್ನಿಗೆ ಕೇಸರಿ ಶಾಲು ಹಾಕಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆಯೇ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ವಿಶ್ವಕಪ್ ನಡೆಯಲಿಕ್ಕಿದೆ.

ಪಾಕಿಸ್ತಾನ ಕ್ರಿಕೆಟ್ ಎಕ್ಸ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ‘ನಾವು ಭಾರತಕ್ಕೆ ಬಂದಿಳಿದಿದ್ದಂತೆ ಆತ್ಮೀಯ ಸ್ವಾಗತ ಕೋರಲಾಯಿತು’ ಎಂದು ಬರೆದುಕೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News