Sunday, September 8, 2024
Homeಸುದ್ದಿರಾಷ್ಟ್ರೀಯಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು.. : ಪ್ಲಾಟ್ಫಾರ್ಮ್ಗೆ ಡಿಕ್ಕಿ ಹೊಡೆದ ರೈಲು : ಐವರು ಸಿಬ್ಬಂದಿಯನ್ನು...

ಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು.. : ಪ್ಲಾಟ್ಫಾರ್ಮ್ಗೆ ಡಿಕ್ಕಿ ಹೊಡೆದ ರೈಲು : ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ ರೈಲ್ವೇ ಅಧಿಕಾರಿಗಳು

ಲಕ್ನೋ : ವೇಗವಾಗಿ ಬಂದ ರೈಲೊಂದು ಪ್ಲಾಟ್‍ಫಾರ್ಮ್‍ಗೆ ಡಿಕ್ಕಿ ಹೊಡೆದ ಘಟನೆ ಮಥುರಾದಲ್ಲಿ ನಡೆದಿದೆ.

ಈ ಘಟನೆಗೆ ಇಲಾಖೆಯ ಸಹಾಯಕನೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಸಹಾಯಕ ಇಂಜಿನ್ ಥ್ರೋಟಲ್ ಮೇಲೆ ಬ್ಯಾಗ್ ಇರಿಸಿದಾಗ ರೈಲು ವೇಗವಾಗಿ ಚಲಿಸಿ ಪ್ಲಾಟ್‍ಫಾರ್ಮ್‍ಗೆ ನುಗ್ಗಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಹಾಯಕ ಸಚಿನ್ ಕುಮಾರ್ ಎಂಬಾತ ಡ್ರೈವಿಂಗ್ ಕೋಚ್‍ಗೆ ಕ್ಯಾಬ್‍ ಕೀ ತರಲು ತೆರಳಿದ್ದರು. ಇದೇ ವೇಳೆ ತನ್ನ ಬ್ಯಾಗ್‍ನ್ನು ಇಂಜಿನ್ ಥ್ರೋಟಲ್‍ನಲ್ಲಿ ಇಟ್ಟಿದ್ದಾರೆ. ಇದೇ ಪರಿಣಾಮದಿಂದ ಈ ದುರ್ಘಟನೆ ಸಂಭವಿಸಿದೆ.

ಆತ ರೈಲ್ವೇ ಇಂಜಿನ್ ಕ್ಯಾಬಿನ್‍ಗೆ ಕೀ ತರಲು ತೆರಳಿದ್ದಾಗ ವಿಪರೀತ ಕುಡಿದಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಈ ರೀತಿಯ ಘಟನೆ ಬಗ್ಗೆ ಆತನ ಅರಿವಿಗೆ ಬಂದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಸೇರಿದಂತೆ ರೈಲು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News