Saturday, July 27, 2024
Homeಸುದ್ದಿಉಡುಪಿ: ನರ ಸಂಬಂಧಿ ಕಾಯಿಲೆಯಿಂದ ವಿದ್ಯಾರ್ಥಿನಿ ಮೃತ್ಯು

ಉಡುಪಿ: ನರ ಸಂಬಂಧಿ ಕಾಯಿಲೆಯಿಂದ ವಿದ್ಯಾರ್ಥಿನಿ ಮೃತ್ಯು

ಉಡುಪಿ, ಸೆ.28: ನರ ಸಂಬಂಧಿ ಕಾಯಿಲೆಗೆ ಒಳಗಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಲ್ಪೆ ಕೊಡವೂರು ಬಳಿ ನಡೆದಿದೆ.

ದಾಮೋದರ್ ಅವರ ಪುತ್ರಿ ಅಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ದೃಶ್ಯ (12) ಸಾವನ್ನಪ್ಪಿದ ದುರ್ದೈವಿ. ಮಂಗಳವಾರ ರಾತ್ರಿ ಔಷಧ ಸೇವಿಸಿ ಮಲಗಿದ್ದ ಬಾಲಕಿ ಬೆಳಗ್ಗೆ ಮಾತನಾಡದ ಸ್ಥಿತಿಯಲ್ಲಿದ್ದರು. ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News