Saturday, July 27, 2024
Homeಸುದ್ದಿರಾಜ್ಯ2000 ರೂ. ಮುಖಬೆಲೆ ನೋಟು ಹಿಂತಿರುಗಿಸಲು ಕೇವಲ 3 ದಿನಗಳಷ್ಟೇ ಬಾಕಿ..!!!

2000 ರೂ. ಮುಖಬೆಲೆ ನೋಟು ಹಿಂತಿರುಗಿಸಲು ಕೇವಲ 3 ದಿನಗಳಷ್ಟೇ ಬಾಕಿ..!!!

ಬೆಂಗಳೂರು : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿದ್ದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಪಿಂಕ್ ನೋಟ್ ಹಿಂದಿರುಗಿಸಿ, ಬೇರೆ ನೋಟು ಪಡೆಯುವಂತೆ ಸೆ.30ರವರೆಗೆ ಗಡುವು ನೀಡಿತ್ತು. ಸದ್ಯ ಈ ಅವಧಿ ಮುಕ್ತಾಯದ ಹಂತದಲ್ಲಿದ್ದು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ.

ಕಳೆದ ಮೇ ನಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್ ಬಿ ಐ ಹಿಂಪಡೆದುಕೊಂಡಿತ್ತು. ಈ ನೋಟು ಪರಿಚಯಪಡಿಸಿದ ಕೇವಲ ಏಳು ವರ್ಷಗಲ್ಲೇ, ಭಾರತವು ರೂ 2000 ನೋಟಿಗೆ ವಿದಾಯ ಹೇಳುತ್ತದೆ ಅನ್ನೋದು ವಿಶೇಷ.

ನೋಟ್‌ ಹಿಂಪಡೆಯುವ ಬಗ್ಗೆ ಆರ್‌ಬಿಐ ಘೋಷಿಸಿದ ಆರಂಭದಲ್ಲಿ ಬ್ಯಾಂಕ್‌ಗಳಿಗೆ ನೋಟು ಹಿಂತಿರುಗಿಸುವವರ ಸಂಖ್ಯೆ ಕೊಂಚ ಹೆಚ್ಚಾಗಿತ್ತು. ಆದರೆ ದಿನ ಕಳೆದಂತೆ ಈ ನೋಟು ಹಿಂತಿರುಗಿಸುವವರ ಪ್ರಮಾಣದಲ್ಲಿ ಕುಸಿತವಾಗಿದೆ. ಇನ್ನು 3 ದಿನ ಮಾತ್ರ ಬಾಕಿ ಇರುವ ಹಿನ್ನೆಲೆ ಆದಷ್ಟು ಬೇಗ ನೋಟ್‌ ಬದಲಿಸಿಕೊಳ್ಳಬೇಕಿದೆ.ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳ ಪೈಕಿ, ಶೇ.93ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ಮರಳಿವೆ.

ಸೆ.30 ರ ನಂತರ 2000 ರೂಪಾಯಿ ನೋಟು ಏನಾಗುತ್ತದೆ..!??

ನೋಟುಗಳು ಸೆಪ್ಟೆಂಬರ್ ಅಂತ್ಯದ ನಂತರವೂ ಕಾನೂನುಬದ್ಧವಾಗಿರುತ್ತವೆ. ಆದರೆ ಯಾವುದೇ ರೀತಿಯ ವಹಿವಾಟು ಉದ್ದೇಶಗಳಲ್ಲಿ ಸ್ವೀಕರಿಸಲಾಗುವುದಿಲ್ಲ.

ನೀಡಲಾದ ಗಡುವನ್ನು ಮೀರಿ ಈ ನೋಟುಗಳನ್ನು ಬಳಸುತ್ತಿರುವುದು ಕಂಡುಬಂದರೆ, ಗಡುವನ್ನು ಮೀರಿ ನೋಟು ಹೊಂದಲು ಕಾರಣವೇನು ಎಂಬುವುದನ್ನು RBI ಗೆ ವಿವರಿಸಬೇಕಾಗುತ್ತದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News