Sunday, September 8, 2024
Homeಸುದ್ದಿನ.24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸ್ಟಾರ್ ಕಲಾವಿದರ ಸಾಥ್

ನ.24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸ್ಟಾರ್ ಕಲಾವಿದರ ಸಾಥ್

ಕೆಸರು ಗದ್ದೆಯಲ್ಲಿ ಕಸರತ್ತು ಮಾಡಿ ಮತ್ತೆ ಕೋಣಗಳ ಜೊತೆ ಕಂಬಳದ ಅಂಗಳಕ್ಕೆ ರಿಷಬ್ ಎಂಟ್ರಿ ಕೊಡ್ತಾರ. ರಕ್ಷಿತ್ ಸೆಣಸಾಟದಿಂದ ಕಾಡು ಶಿವನ ಅಬ್ಬರ ಕಟ್ರೋಲ್ ಮಾಡ್ತಾರ? ಈ ಇಬ್ಬರ ನಡುವೆ ಸೀನಿಯರ್ ಉಪ್ಪಿ ಕೈ ಚಳಕಕ್ಕೆ ಕೋಣಗಳು ಕಮಾಲ್ ಮಾಡುತ್ತಾ? ಗುರುಕಿರಣ್ ಸಂಗೀತಕ್ಕೆ ಕೆಸರು ಗದ್ದೆಯಲ್ಲಿ ಅಲೆಗಳು ಏಳುತ್ತಾ? ಏನಿದು ಸೆಲಬ್ರೇಟಿಗಳ ನಡುವಿನ ಹೋರಾಟ?

ಕಾಂತಾರ ಸಿನಿಮಾದಲ್ಲಿ ಕೋಣಗಳ ಜೊತೆ ಕೆಸರು ಗದ್ದೆಗೆ ಇಳಿದು ಸೈ ಅನಿಸಿಕೊಂಡ್ರು ರಿಷಬ್ ಶೆಟ್ಟಿ. ಕರಾವಳಿಯ ಸಾಂಪ್ರದಾಯಕ ಕ್ರೀಡೆ ಕಂಬಳವನ್ನ ಬೆಳ್ಳಿತೆರೆಯಲ್ಲಿ ನೋಡಿ ಸಂಭ್ರಮಿಸಿದ್ರು ಆಡಿಯನ್ಸ್. ಬಾಕ್ಸ್ಆಫೀಸ್‌ನಲ್ಲಿ ಬಂಪರ್ ಬೆಳೆ ಆಯ್ತು. ನಿರ್ಮಾಪಕರಿಗೆ ಒಳ್ಳೆ ಕಾಸು ಹೆಸರು ಎರಡೂ ಬಂತು. ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆ ಗೌರವ ಸಿಕ್ತು. ಈಗ ಕಾಂತರದ ಕಂಬಳದ ಸನ್ನಿವೇಷ ಬೆಂಗಳೂರಿನ ಜನರ ಕಣ್ಣ ಮುಂದೆ ಮೂಡಿ ಬರಲಿದೆ. ಅದಕ್ಕೆ ಕಾರಣ ಬೆಂಗಳೂರು ಕಂಬಳ.‌

ನೂರಾರು ವರ್ಷಗಳ ಇತಿಹಾಸವಿರುವ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಕಂಬಳವನ್ನ ಬೆಂಗಳೂರಿನಲ್ಲಿ ನಡೆಸಲು ತಿರ್ಮಾನ ಆಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೆಂಗಳೂರು ಕಂಬಳ ನಡೆಸಲು ಕೆಲಸ ಶುರುವಾಗಿದೆ. 150ಕ್ಕೂ ಹೆಚ್ಚಿನ ಕೋಣಗಳು ಈ ಪೈಪೋಟಿಯಲ್ಲಿ ಭಾಗಿಯಾಗಲಿದೆ. ಸುಮಾರು 7 ಲಕ್ಷ ಜನ ಈ ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಯೋಜಕರು. ಇದಕ್ಕೆ ಈಗಾಗ್ಲೇ ಸಿದ್ದತೆಗಳು ಕೂಡ ಜೋರಾಗಿದೆ. ನವೆಂಬರ್ ಅಂತ್ಯದಲ್ಲಿ ಬೆಂಗಳೂರು ಕಂಬಳ ಶುರು.

ಇದರ ಜೊತೆಯಲ್ಲಿ ಕಂಬಳದ ಆಯೋಜಕರಿಗೆ ಹೊಸದೊಂದು ಐಡಿಯಾ ಬಂದಿದೆ. ಕಂಬಳವನ್ನ ಇನ್ನೂ ಕುತೂಹಲ ಭರಿತವಾಗಿ ಜನರ ಮುಂದಿಡುವ ಯೋಚನೆ ಮಾಡ್ತಿದೆ. ಐಪಿಎಲ್ ಮಾದರಿಯಲ್ಲಿ ಕಂಬಳವನ್ನ ಆಯೋಜಿಸುವ ಚಿಂತನೆ ಶುರುವಾಗಿದೆ. ಐಪಿಎಲ್ ಆಯೋಜನೆ ಮಾಡಿದ ತಂಡದ ಸದಸ್ಯರ ಜೊತೆ ಕಂಬಳದ ಟೀಮ್ ಮಾತು-ಕತೆ ಕೂಡ ನಡೆಸಿದ್ದಾರೆ. ಕರಾವಳಿಯ ಕಲಾವಿದರ ತಂಡಗಳನ್ನ ಮಾಡಿ ಆ ತಂಡಗಳಿಗೆ ಬಲಿಷ್ಠ ಕೋಣಗಳನ್ನ ಸೇರಿಸಿ ಜನರಿಗೆ ಮತ್ತಷ್ಟು ಹತ್ತಿರವಾಗುವ ಯೋಚನೆಯಲ್ಲಿದ್ದಾರೆ.

ಕಾಂತಾರ ಹೀರೋ ರಿಷಬ್ ಈಗಾಗ್ಲೇ ಕೋಣಗಳ ಜೊತೆ ಸಿನಿಮಾದಲ್ಲಿ ಕಂಬಳದ ಅಂಗಳಲ್ಲಿ ಇಳಿದು ಸಕ್ಸಸ್ ಆಗಿದ್ದಾರೆ. ರಿಷಬ್ ಕೋಣಗಳಿಗೆ ರಕ್ಷಿತ್ ಪೈಪೋಟಿ ಕೊಡೋ ರೀತಿ ಆಯೋಜಕರು ಪ್ಲ್ಯಾನ್ ಮಾಡ್ತಿದ್ದಾರೆ. ಇವರ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಇನ್ನೂ ಉಪ್ಪಿ ಸುಮ್ಮನೆ ಇರ್ತಾರ ನಾವು ಒಂದು ಕೈ ನೋಡೋಣ ಅಂತ ಅವರೂ ಅಖಾಡಕ್ಕೆ ಇಳಿದು ಫೈಟ್ ಮಾಡದೆ ಬಿಡ್ತಾರ. ಈ ಹೀರೋಗಳ ಜೊತೆ ಬಾಲಿವುಡ್, ಟಾಲಿವುಡ್ ನಟಿಯರೂ ಸೇರಿಕೊಳ್ತಾರೆ.

ಬೆಂಗಳೂರು ಕಂಬಳಕ್ಕೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಕೂಡ ಭಾಗಿಯಾಗಲಿದ್ದಾರೆ. ಬಾಹುಬಲಿ ಬೆಡಗಿ ಕರಾವಳಿ ಹುಡುಗಿ ಅನುಷ್ಕಾ ಶೆಟ್ಟಿ ಕೂಡ ಕಂಬಳಕ್ಕೆ ಜೊತೆ ಆಗ್ತಾರೆ. ಇದರ ಜೊತೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಸರು ಮಾಡಿರುವ ಕಲಾವಿದರು ಕೂಡ ಕರಾವಳಿ ಕ್ರೀಡೆಯ ಯಶಸ್ಸಿಗೆ ಕೈ ಜೋಡಿಸಲಿದ್ದಾರೆ. ಈ ಕೆಲಸಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನ ನೇಮಿಸಿದ್ದಾರೆ ಕಂಬಳದ ಆಯೋಜಕರು.

ಗುರುಕಿರಣ್ ಕೆಲಸ ಶುರು ಮಾಡಿದ್ದಾರೆ. ಊರು-ಕೇರಿಗಳಲ್ಲಿರುವ ಕಂಬಳದ ಮನಸ್ಸುಗಳನ್ನ ಒಟ್ಟಿಗೆ ಒಂದೇ ವೇದಿಕೆಗೆ ಕರೆಸುವ ಕೆಲಸ ಮಾಡ್ತಿದ್ದಾರೆ. ಆಯೋಜಕರ ಚಿಂತನೆಯಲ್ಲಿ ಐಪಿಎಲ್ ಮಾದರಿಯಲ್ಲಿ ಕಂಬಳ ನಡೆಸಲು ಇಬ್ಬರ ಅನುಮತಿ ಬೇಕಾಗುತ್ತೆ. ಕಂಬಳದ ಮುಖ್ಯ ಫಿಲ್ಲರ್‌ಗಳು ಅಂದ್ರೆ ಅದು ಕೋಣಗಳನ್ನ ಸಾಕಿರುವ ಮಾಲಿಕರು ಮತ್ತು ಅದನ್ನ ನೋಡಿ, ಪ್ರೀತಿಸಿ, ಆರಾಧಿಸುವ ಜನರು ಇವರಿಬ್ಬರೂ ಒಪ್ಪಿಗೆ ಕೊಟ್ರೆ ಕಂಬಳವನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಾವು ರೆಡಿ ಅಂತಿದ್ದಾರೆ ಆಯೋಜಕರು.

ಬಣ್ಣದ ಲೋಕದ ಮಂದಿ ಜೊತೆ ರಾಜಕಾರಣಿಗಳು ಕೂಡ ಅಖಾಡಕ್ಕೆ ಇಳಿಯಲಿದ್ದಾರೆ. ಶಾಸಕ ಹ್ಯಾರಿಸ್, ಅಶ್ವತ್ ನಾರಾಯಣ, ಸಚಿವ ಸುಧಾಕರ್, ಸ್ಪೀಕರ್ ಖಾದರ್ ಸೇರಿದಂತೆ ಹಲವರು ನಮಗೂ ಕೋಣಗಳನ್ನ ಕೋಡಿ ನಾವು ನಮ್ಮ ತಂಡದ ಜೊತೆ ಟಫ್ ಫೈಟ್ ಕೊಡ್ತಿವಿ ಅಂತ ಆಯೋಜಕ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದ್ರೆ ಇನ್ನೂ ಕೋಣಗಳ ಮಾಲಿಕರ ಜೊತೆ ಚರ್ಚೆ ಅಂತಿಮ ಆಗ್ಬೇಕಿದೆ ಆಮೇಲೆ ಉಳಿದ ವಿಚಾರ ಅಂತಿದ್ದಾರೆ ಬೆಂಗಳೂರು ಕಂಬಳದ ಆಯೋಜಕರು.

ಕಲಾವಿದರ ನಡುವೆ ಕಂಬಳದ ಪದಕಕ್ಕಾಗಿ ಪೈಪೋಟಿ ಶುರುವಾಗುತ್ತಾ ಅನ್ನೊ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ನವೆಂಬರ್ 24ಕ್ಕೆ ಕಾರ್ಯಕ್ರಮ ಶುಭಾರಂಭ ಆಗಲಿದೆ. 23 ಮತ್ತು 25 ಕೋಣಗಳು ಅಖಾಡದಲ್ಲಿ ಅಬ್ಬರಿಸಲಿದ್ದಾವೆ. ಬೆಂಗಳೂರಿನ ಜನಕ್ಕೆ ಕಂಬಳವನ್ನ ನೋಡಿ ಕಣ್ತುಂಬಿಕೊಳ್ಳುವ ಟೈಮ್ ಹತ್ತಿರ ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News