Saturday, July 27, 2024
Homeಸುದ್ದಿರಾಷ್ಟ್ರೀಯಗಂಡನ ಸಾವಿಗೆ ಕಾರಣ ತಿಳಿದು ಬಿಗ್ ಶಾಕ್; ‘ಗೂಗಲ್ ಮ್ಯಾಪ್’ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತ್ನಿ..!

ಗಂಡನ ಸಾವಿಗೆ ಕಾರಣ ತಿಳಿದು ಬಿಗ್ ಶಾಕ್; ‘ಗೂಗಲ್ ಮ್ಯಾಪ್’ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತ್ನಿ..!

ಮೊದಲೆಲ್ಲಾ ಎಲ್ಲಾದ್ರೂ ಹೋಗಬೇಕು ಎಂದರೆ ರೋಡ್‌ ಮ್ಯಾಪ್‌ ಚೆನ್ನಾಗಿ ಗೊತ್ತಿರೋ ಡ್ರೈವರ್ಸ್ ಹತ್ರ ಕೇಳೋರು. ಇವತ್ತು ಅಡ್ರೆಸ್‌ ಗೊತ್ತಿಲ್ಲದಿದ್ರೂ ಪರವಾಗಿಲ್ಲ., ಡೆಸ್ಟಿನೇಷನ್‌ ಆರಾಮಾಗಿ ರೀಚ್ ಆಗಬಹುದು. ಯಾಕಂದ್ರೆ, ಎಲ್ಲರ ಮೊಬೈಲ್‌ನಲ್ಲಿ ಇಂದು ಗೂಗಲ್ ಮ್ಯಾಪ್ ಇದೆ.

ಹೀಗೆ, ಗೂಗಲ್‌ ಮ್ಯಾಪ್‌ ನೋಡ್ಕೊಂಡು ಹೋಗ್ತಿದ್ದ ಓರ್ವ ವ್ಯಕ್ತಿ, ಬ್ರಿಡ್ಜ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಆತನ ಫ್ಯಾಮಿಲಿ ಈಗ ಗೂಗಲ್‌ ವಿರುದ್ಧ ಕೇಸ್‌ ಕೂಡ ದಾಖಲಿಸಿಬಿಟ್ಟಿದೆ.

ಗೂಗಲ್‌ ಇವತ್ತು ಕೇವಲ ಸರ್ಚ್‌ ಇಂಜಿನ್ ಮಾತ್ರವಲ್ಲ, ಅದೆಷ್ಟೋ ಜನರಿಗೆ ಜ್ಞಾನದ ಗುರು. 1998ರಲ್ಲಿ ಶುರುವಾದ ಗೂಗಲ್‌ ಇವತ್ತು ಹೆಮ್ಮರವಾಗಿ ಬೆಳೆದಿದೆ. ಗೂಗಲ್‌ ಇಲ್ಲದಿದ್ರೆ ಬದುಕೇ ಇಲ್ಲ ಅನ್ನೋ ಮಟ್ಟಿಗೆ ರೀಚ್ ಆಗಿದೆ ಗೂಗಲ್‌ ದುನಿಯಾ.

ಗೂಗಲ್‌ ಕೇವಲ ಸರ್ಚ್ ಎಂಜಿನ್‌ ಆಗಿ ಮಾಹಿತಿ ಮಾತ್ರ ಕೊಡೋಕೆ ಸೀಮಿತವಾಗಿಲ್ಲ. ಕ್ರಾಂತಿಕಾರಕ ಆ್ಯಪ್‌ಗಳನ್ನ ಕೂಡ ಪರಿಚಯಿಸಿತು. ಅದರಲ್ಲಿ ಪ್ರಮುಖವಾದದ್ದು 2005ರಲ್ಲಿ ಲಾಂಚ್ ಆದ ಗೂಗಲ್‌ ಮ್ಯಾಪ್ಸ್‌. ನೀವು ಎಲ್ಲಿಗೆ ಹೋಗಬೇಕಾದರೂ ಗೂಗಲ್‌ ಮ್ಯಾಪ್‌ ಅತ್ಯಂತರ ಸಹಾಯಕಾರಿ. ನೀವು ನಿಂತುಕೊಂಡ ಜಾಗದಿಂದ ನೀವು ಎಲ್ಲಿಗೆ ಹೂಗಬೇಕು ಅಂದ್ಕೊಂಡಿದಿರೋ ಅಲ್ಲಿಗೆ ಕರೆದುಕೊಂಡು ಹೋಗೋ ರೂಟ್‌ ಗೂಗಲ್‌ ಮ್ಯಾಪ್‌ ಆ್ಯಪ್‌ ಕ್ಷಣಾರ್ಥದಲ್ಲಿ ಬಂದು ಬಿಡುತ್ತೆ. ಅಸಲಿಗೆ ಈ ಆ್ಯಪ್‌ನ ಪ್ರತಿ ತಿಂಗಳು ಒಂದು ಬಿಲಿಯನ್ ಜನರು ಬಳಸುತ್ತಾರೆ.

ವಿಶೇಷ ಅಂದ್ರೆ, ಕೇವಲ ಮ್ಯಾಪ್‌ಗೆ ಸೀಮಿತವಾಗದ ಗೂಗಲ್‌ ಮ್ಯಾಪ್‌, ನೀಯರ್‌ ಬೈ ಇರೋ, ರೆಸ್ಟೋರೆಂಟ್‌, ಪೆಟ್ರೋಲ್‌ ಬಂಕ್, ಕಾಫಿ ಶಾಪ್ಸ್‌ ಎಲ್ಲದರ ಮಾಹಿತಿಯೂ ಕೊಡುತ್ತದೆ. ಸ್ಯಾಟಲೈಟ್‌ ಇಮೆಜರಿ ಫೋಟೋಸ್‌ನಿಂದ ಕರಾರುವಕ್ಕಾದ ದಾರಿ ಕೊಡುತ್ತೆ ಈ ಮ್ಯಾಪ್‌. ಗೂಗಲ್‌ನ ಪ್ರಕಾರ, ಈ ಮ್ಯಾಪ್‌ನ ಕ್ಷಣ ಕ್ಷಣವೂ ಅಪ್ಡೇಟ್ ಮಾಡುತ್ತಲೇ ಇರುತ್ತೆ. ಹಾಗಂತ ಗೂಗಲ್‌ ಎಲ್ಲವನ್ನೂ ಅಪ್ಡೇಟ್ ಮಾಡುತ್ತೆ ಅಂತಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಕೇಸ್. ಯಾಕಂದ್ರೆ, ಗೂಗಲ್ ಮ್ಯಾಪ್‌ ತೋರಿಸಿಕೊಟ್ಟ ಮ್ಯಾಪ್‌ನಂತೆ ಹೋಗಿ, ಓರ್ವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡು ಬಿಟ್ಟಿದ್ದಾನೆ.

ಅಸಲಿಗೆ ಆ ರಾತ್ರಿ ಆಗಿದ್ದೇನು..!??

ಮೆಡಿಕಲ್‌ ಫೀಲ್ಡ್‌ನಲ್ಲಿ ಕೆಲಸ ಮಾಡ್ತಿದ್ದ ಅಮೆರಿಕಾದ ಫೀಲಿಪ್‌ ಪಾಕ್ಸನ್‌ ಗೆ ಪತ್ನಿ, ಇಬ್ಬರು ಮುದ್ದಾದ ಮಕ್ಕಳಿದ್ದರು. ಕಳೆದ ವರ್ಷ ತನ್ನ ಮಗಳ ಬರ್ತ್‌ಡೇ ಮುಗಿಸಿಕೊಂಡು ವಾಪಸ್ ಹೋಗ್ತಿರುವಾಗ, ಜೋರಾದ ಮಳೆ ಬಂದಿದೆ. ದಾರಿಯಲ್ಲಿ ಹೋಗುವಾಗ ಕನ್‌ಫ್ಯೂಶನ್ ಆಗಿದೆ. ಹೀಗಾಗಿ ಗೂಗಲ್‌ ಮ್ಯಾಪ್‌ ಆನ್ ಮಾಡಿಕೊಂಡಿದ್ದಾರೆ. ಗೂಗಲ್ ಮ್ಯಾಪ್‌ ಈ ಬ್ರಿಡ್ಜ್‌ನತ್ತ ಹೋಗಿ, ಎಡಕ್ಕೆ ತಿರುಗುವಂತೆ ಸೂಚಿಸಿದೆ. ಗೂಗಲ್ ಮ್ಯಾಪ್‌ ಸೂಚಿಸಿದಂತೆ ಹೋಗಿದ್ದಕ್ಕೆ ಕಾರು 20 ಅಡಿ ಕೆಳಗೆ ಬಿದ್ದಿದೆ. ನೀರಿನಲ್ಲಿ ಮುಳುಗಿದ ಪರಿಣಾಮ ಫಿಲಿಫ್‌ ಪಾಕ್ಸನ್‌ ಮೃತಪಟ್ಟಿದ್ದಾನೆ.

ಈ ಘಟನೆ ನಡೆದು ಒಂದು ವರ್ಷವಾಗಿದೆ. ಯಾವಾಗ ಫಿಲಿಫ್ ಪಾಕ್ಸನ್‌ ಮಕ್ಕಳು, ತಾಯಿಗೆ ಅಪ್ಪನ ಸಾವಿಗೆ ಕಾರಣವೇನು ಅಂತಾ ಪದೇ ಪದೇ ಕೇಳೋಕೆ ಶುರುವಿಟ್ಟಿರೋ, ಆಕೆ ಸತ್ಯಶೋಧನೆಗೆ ಮುಂದಾಗಿದ್ದಾರೆ.

ಗೂಗಲ್‌ ಮ್ಯಾಪ್‌ನಿಂದ ಅನ್ನೋ ಸಂಶಯ ಆಕೆಗೆ ಬಂದಿದೆ. ಹೀಗಾಗಿ ಅಲಿಸಿಯಾ,ಕೋರ್ಟ್‌ನಲ್ಲಿ ಗೂಗಲ್‌ ಮ್ಯಾಪ್ ವಿರುದ್ಧ ದಾವೆ ಹೂಡಿದ್ದಾರೆ. ಗೂಗಲ್‌ ಮ್ಯಾಪ್‌ ದುರಸ್ತಿಯಲ್ಲಿರುವ ಬ್ರಿಡ್ಜ್‌ನಿಂದ ಕ್ರಾಸ್ ಮಾಡುವಂತೆ ಸೂಚಿಸಿದೆ. ಇದೇ ದಾರಿ ಅನುಸರಿಸಿದ್ದಕ್ಕೆ ತನ್ನ ಪತಿ ಸಾವನ್ನಪ್ಪಿದ್ದಾರೆ. ಹೀಗಾಗಿ ತನಗೆ ನ್ಯಾಯ ಒದಗಿಸುವಂತೆ ಪತ್ನಿ ಕೋರ್ಟ್‌ನ ಮೊರೆ ಹೋಗಿದ್ದಾಳೆ.

ಈ ದಾವೆ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಮ್ಯಾಪ್‌, ನಾವು ಸಮರ್ಪಕವಾದ ರೂಟಿಂಗ್ ಮಾಹಿತಿ ಕೊಡುವುದು ನಮ್ಮ ಗುರಿ. ಈ ದಾವೆಯ ಬಗ್ಗೆ ನಾವು ಕೂಲಂಕುಶವಾಗಿ ಪರಿಶೀಲಿಸಿ, ಮುಂದಿನ ಕ್ರಮಕೈಗೊಳ್ಳುತ್ತೇವೆ ಅಂತಾ ಹೇಳಿದೆ. ಅಂದ್ಹಾಗೇ, ಗೂಗಲ್‌ ಮ್ಯಾಪ್‌ನ ತಪ್ಪಾದ ಮಾಹಿತಿಯಿಂದ ಸಾವನ್ನಪ್ಪಿದರ ಪೈಕಿ ಫಿಲಿಫ್‌ ಪಾಕ್ಸನ್‌ ಮೊದಲನೇನಲ್ಲ. 2020ರಲ್ಲಿ ಓರ್ವ ಯುವಕ ಗೂಗಲ್‌ ಮ್ಯಾಪ್‌ ಮಿಸ್ ಇನ್ಫಾರ್ಮೇಶನ್‌ನಿಂದ ಅಪಘಾತಕ್ಕಿಡಾಗಿ ಸಾವನ್ನಪ್ಪಿದ್ದ. 2019ರಲ್ಲೂ ಟ್ರಕ್‌ ಡ್ರೈವರ್‌, ಇಂಡೋನೇಷ್ಯಾದಲ್ಲಿ ಇದೇ ರೀತಿ ಅಪಘಾತಕ್ಕಿಡಾಗಿದ್ದ. ಇಷ್ಟೇ ಯಾಕೆ , ಕಳೆದ ತಿಂಗಳು ಆಸ್ಟ್ರೇಲಿಯಾದ ನರ್ಸ್‌, ಗೂಗಲ್‌ ಮ್ಯಾಪ್‌ ಅನುಸರಿಸಿದ್ದಕ್ಕೆ ಮರಭೂಮಿಗೆ ಹೋಗಿದ್ದಳು. ಅಲ್ಲಿ ಊಟ ಮತ್ತು ನೀರು ಸಿಗದೇ ಆಕೆ ಸಾವನ್ನಪ್ಪಿದ್ದ ದಾರುಣ ಘಟನೆಯೂ ನಡೆದಿತ್ತು.

ಈ ರೀತಿಯ ಸಾಮಾನ್ಯ ಕೇಸ್‌ಗಳು ಎಲ್ಲೆಡೆಯೂ ನಡೆದಿದೆ. ಪ್ರಶ್ನೆ ಏನಂದ್ರೆ, ಇದು ಸಂಪೂರ್ಣವಾಗಿ ಗೂಗಲ್‌ ತಪ್ಪೇ? ಕೆಲವರು ಹೇಳೋದು ಗೂಗಲ್‌ ಮ್ಯಾಪ್ ಇರೋದು ಕೇವಲ ರೆಫರೆನ್ಸ್‌ಗೆ. ಹೀಗಾಗಿ ಈ ರೀತಿಯ ಘಟನೆಗಳಿಗೆ ಗೂಗಲ್ ಜವಾಬ್ದಾರಿಯಾಗೋದಿಲ್ಲವೆಂದು. ಆದ್ರೆ, ಮತ್ತೆ ಕೆಲವರು ಈ ರೀತಿಯ ಘಟನೆಗಳು ಪುಂಖಾನುಪುಂಖವಾಗಿ ನಡೆಯುತ್ತಿದೆ. ಹೀಗಾಗಿ ಗೂಗಲ್ ಈ ಹೊಣೆಗಾರಿಕೆಯನ್ನ ಹೊರಬೇಕು ಅಂತಾ ಹೇಳ್ತಾರೆ. ಹೀಗಾಗಿ ಫಿಲಿಫ್‌ ಕೇಸ್‌ನಲ್ಲಿ ಕೋರ್ಟ್ ಯಾವ ರೀತಿಯ ತೀರ್ಪು ಕೊಡುತ್ತೆ ಅನ್ನೋದನ್ನ ನೋಡ್ಬೇಕು. ಹಾಗಂತಾ ಗೂಗಲ್ ಮ್ಯಾಪ್ ಯೂಸ್ ಮಾಡಬೇಡಿ ಅಂತಲ್ಲ. ಆದ್ರೆ, ಮಾಡುವಾಗ ಎಚ್ಚರವಿರಲಿ..

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News