Wednesday, September 11, 2024
Homeಸುದ್ದಿಉಚ್ಚಿಲ ದಸರಾ-2023: ಯುವ ದಸರಾ ನೃತ್ಯೋತ್ಸವ ಆಡಿಶನ್‌ ಸುತ್ತಿಗೆ ಸ್ಪರ್ಧಿಗಳ ಆಹ್ವಾನ

ಉಚ್ಚಿಲ ದಸರಾ-2023: ಯುವ ದಸರಾ ನೃತ್ಯೋತ್ಸವ ಆಡಿಶನ್‌ ಸುತ್ತಿಗೆ ಸ್ಪರ್ಧಿಗಳ ಆಹ್ವಾನ

ಕಾಪು, ಸೆ.23: ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎರಡನೇ ವರ್ಷ ನಡೆಯಲಿರುವ ಉಚ್ಚಿಲ ದಸರಾ-2023ರ ಅಂಗವಾಗಿ ಹಮ್ಮಿಕೊಂಡಿರುವ ಯುವ ದಸರಾ ನೃತ್ಯೋತ್ಸವಕ್ಕೆ ಸಾರ್ವಜನಿಕರಿಂದ ನೃತ್ಯ ಸ್ಪರ್ಧೆಯ ಆಡಿಶನ್‌ ಸುತ್ತಿಗಾಗಿ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ.

ಅ. 8ರಂದು ಸಂಜೆ 3ರಿಂದ 6ರ ವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ಆಡಿಶನ್‌ ಸುತ್ತಿನ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ನೆಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರತಿಯೊಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನರಿಗೆ ಅವಕಾಶವಿದ್ದು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ತಂಡವೊಂದಕ್ಕೆ 5 (4+1) ನಿಮಿಷದ ಅವಕಾಶವಿದ್ದು ಆಡಿಶನ್‌ ಸುತ್ತಿನಲ್ಲಿ ಯಾವುದೇ ವೇಷಭೂಷಣದ ಅಗತ್ಯವಿಲ್ಲ. ಇಲ್ಲಿ ಆಯ್ಕೆಯಾದ ತಂಡಗಳು ಅ.15ರಂದು ನಡೆಯುವ ಯುವ ದಸರಾ ಉತ್ಸವದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.

ಆಡಿಶನ್‌ ಸುತ್ತಿನಲ್ಲಿ ಒಬ್ಬ ಸ್ಪರ್ಧಿ ಬೇರೆ ಬೇರೆ ತಂಡಗಳ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಯಾವುದೇ ಭಾಷೆ ಅಥವಾ ನೃತ್ಯ ಪ್ರಾಕಾರದ ನಿರ್ಬಂಧವಿರುವುದಿಲ್ಲ.
ಫೈನಲ್‌ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಸಹಿತ ಪ್ರಥಮ ನಗದು 30 ಸಾವಿರ ರೂ., ದ್ವಿತೀಯ ನಗದು 20 ಸಾವಿರ ರೂ., ತೃತೀಯ ನಗದು 15 ಸಾವಿರ ರೂ., ಚತುರ್ಥ ನಗದು 10 ಸಾವಿರ ರೂ. ಹಾಗೂ 5 ತಂಡಗಳಿಗೆ ತಲಾ 5 ಸಾವಿರ ರೂ. ಗಳಂತೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಉಚ್ಚಿಲ ದಸರಾ ಸಮಿತಿಯನ್ನು ಸಂಪರ್ಕಿಸಬಹುದು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News