ಉಡುಪಿ : ಊಟದ ವಿಚಾರಕ್ಕೆ ಜಗಳ; ಪ್ರಕರಣ ದಾಖಲು

ಉಡುಪಿ : ಊಟದ ವಿಚಾರಕ್ಕೆ ಜಗಳ ಮಾಡಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.

ಉಡುಪಿಯ ಶ್ರೀಕೃಷ್ಣಾಪುರ ಮಠದಲ್ಲಿ ಸೆ. 18ರಂದು ಊಟದ ಸಾಲಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಆರೋಪಿ ಚಂದ್ರಕಾಂತ್‌ ಜೋಶಿ ಎಂಬಾತ ಧ್ರುವ ಅವರಿಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಮರದ ಕೋಲಿನಿಂದ ಹೊಡೆದಿದ್ದಾನೆ.

ಈ ಜಗಳ ಮುಂದುವರಿದು ಸೆ. 19ರಂದು ಮಧ್ಯಾಹ್ನ ಶ್ರೀಕೃಷ್ಣ ಮಠದ ಆವರಣದಲ್ಲಿರುವ ಶ್ರೀರಾಘವೇಂದ್ರ ಮಠದ ಎದುರಿನಲ್ಲಿ ಹೋಗುತ್ತಿದ್ದ ಧ್ರುವ ಅವರನ್ನು ಆರೋಪಿ ಅಡ್ಡಗಟ್ಟಿ ಮರದ ರೀಪಿನಿಂದ ಎಡ ಕೈತೋಳಿಗೆ ಹೊಡೆದು ರಕ್ತಗಾಯ ಉಂಟುಮಾಡಿ ಜೀವಬೆದರಿಕೆ ಹಾಕಿದ್ದಾನೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top