Wednesday, May 22, 2024
Homeಸುದ್ದಿಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ ಸಾಯಿ ಪಲ್ಲವಿ ಮದುವೆ ಫೋಟೋ

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ ಸಾಯಿ ಪಲ್ಲವಿ ಮದುವೆ ಫೋಟೋ

ಖ್ಯಾತ ನಟಿ ಸಾಯಿ ಪಲ್ಲವಿ ಸದ್ದಿಲ್ಲದೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸಹ ನಟ ಶಿವಕಾರ್ತಿಕೇಯನ್ ಜೊತೆ ಹಾರ ಹಾಕಿಕೊಂಡು ನಿಂತಿರುವ ಫೋಟೋ ವೈರಲ್ ಆಗಿದ್ದು, ಅನೇಕರು ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಜೋಡಿಗೆ ಶುಭ ಹಾರೈಸಿದ್ದಾರೆ.

ಸಾಯಿ ಪಲ್ಲವಿ ಫ್ಯಾನ್ಸ್ ಪೇಜ್‍ ನಲ್ಲಿ ಫೋಟೋಗಳು ಹೆಚ್ಚಾಗಿ ಶೇರ್ ಆಗಿದ್ದು, ಯಾವುದೇ ಬಣ್ಣ, ಬ್ಯೂಟಿ ನೋಡದೇ ತಮ್ಮ ನೆಚ್ಚಿನ ನಟಿ ಮದುವೆಯಾಗಿದ್ದಾರೆ ಎಂದು ಹೆಮ್ಮೆಯಿಂದ ಸಂದೇಶಗಳನ್ನು ಬರೆದಿದ್ದಾರೆ. ಈ ಹಿಂದೆ ಸಾಯಿ ಪಲ್ಲವಿ ಗರ್ಭಿಣಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ಮದುವೆಯ ಫೋಟೋವನ್ನೂ ಎಲ್ಲರೂ ಹಂಚಿಕೊಂಡಿದ್ದಾರೆ.

ಆ ಫೋಟೋ ವೈರಲ್ ಆಗುತ್ತಿದ್ದಂತೆಯೇ ಅಸಲಿಯತ್ತು ಹೊರ ಬಿದ್ದಿದೆ. ಅದು ಸಿನಿಮಾ ಮುಹೂರ್ತವೊಂದರ ಫೋಟೋವಾಗಿದ್ದು, ಸಹನಟನ ಜೊತೆ ಹಾರ ಹಾಕಿಕೊಂಡು ನಿಂತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಮುಹೂರ್ತದ ದಿನದಂದು ಹೂವಿನ ಹಾರ ಹಾಕಿ ಗೌರವಿಸುವುದು ಸಂಪ್ರದಾಯ. ಆ ಫೋಟೋವನ್ನೇ ವೈರಲ್ ಮಾಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸಾಯಿ ಪಲ್ಲವಿ ಕೆಲ ತಿಂಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದರು. ಕಾಶಿಯಾತ್ರೆಯನ್ನೂ ಸಹ ಪಾಲಕರೊಂದಿಗೆ ಮಾಡಿದ್ದರು. ಇದೀಗ ಮತ್ತೆ ಸಿನಿಮಾಗಳನ್ನು ಒಪ್ಪಿಕೊ‍ಳ್ಳುತ್ತಿದ್ದು, ಈ ಸಂದರ್ಭದ ಫೋಟೋವನ್ನು ಮದುವೆ ಎಂದು ಹಬ್ಬಿಸಲಾಗುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News