Wednesday, September 18, 2024
Homeಸುದ್ದಿಕರಾವಳಿಬಂಟಕಲ್ಲು : ಬಸ್ಸು ನಿಲ್ದಾಣ ಗ್ರಂಥಾಲಯ ಲೋಕಾರ್ಪಣೆ

ಬಂಟಕಲ್ಲು : ಬಸ್ಸು ನಿಲ್ದಾಣ ಗ್ರಂಥಾಲಯ ಲೋಕಾರ್ಪಣೆ

ಉಡುಪಿ : ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇದರ ಪ್ರಯೋಜಕತ್ವದ ವಿನೂತನ ಕಲ್ಪನೆಯ ಬಸ್ಸು ನಿಲ್ದಾಣ ಗ್ರಂಥಾಲಯ ಬಂಟಕಲ್ಲು ಬಸ್ಸು ನಿಲ್ದಾಣದಲ್ಲಿ ಲೋಕಾರ್ಪಣೆಯಾಯಿತು.

ಸ್ವಲ್ಪ ಹೊತ್ತು ಮೊಬೈಲ್ ಬಿಡಿ.. ಪುಸ್ತಕ ಹಿಡಿ ಎಂಬ ಧೇಯ ವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಹಾಗೂ ಬಸ್ಸು ನಿಲ್ದಾಣದಲ್ಲಿ ಬಸ್ಸು ಕಾಯುವ ಪ್ರಯಾಣಿಕರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸುವುದು , ಹಾಗೂ ಪುಸ್ತಕ ಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ಬಸ್ಸು ನಿಲ್ದಾಣದಲ್ಲಿ ನಿರ್ಮಿಸಿದ ಸುಮಾರು 150 ಪುಸ್ತಕಗಳಿರುವ ಗ್ರಂಥಾಲಯವನ್ನು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ ಆರ್ ಪಾಟ್ಕರ್ ಜ್ಞಾನ ದೀವಿಗೆಯನ್ನು ದೀಪ ಹಚ್ಚಿ ಬೆಳಗುವ ಮೂಲಕ ಸುಮಾರು ಲೊಕಾರ್ಪಣೆಗೈದರು.

ನಂತರ ಮಾತನಾಡಿ, ಈ ಬಸ್ಸು ನಿಲ್ದಾಣ ಗ್ರಂಥಾಲಯದ ಉದ್ದೇಶ, ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಈ ಗ್ರಂಥಾಲಯದ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ತಿಳಿಸಿ ತಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ನೀಡುವಂತೆ ವಿನಂತಿಸಿದರು.

ಪುಸ್ತಕಗಳನ್ನು ನೀಡಿದ ಪುಸ್ತಕ ಪ್ರೇಮಿಗಳಿಗೆ ಕೃತಜ್ಞತೆ ತಿಳಿಸಿದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಮರಾಠೆಯವರು ಸಂದೇಶವನ್ನು ನೀಡಿ ಪುಸ್ತಕ ಓದುದರಿಂದಾಗುವ ಉಪಯೋಗ, ಸಾಹಿತ್ಯ ಅಭಿರುಚಿ, ಓದುವ ಹವ್ಯಾಸಗಳ ಬಗ್ಗೆ ತಿಳಿಸಿ ನಾಗರಿಕ ಸೇವಾ ಸಮಿತಿಯ ಈ ಕಾರ್ಯವನ್ನು ಶ್ಲಾಘಿಸಿದರು.

ತನ್ನ ಪುಸ್ತಕ ದೇಣಿಗೆಯನ್ನು ಪ್ರಕಟಿಸಿದರು. ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಬಂಟಕಲ್ಲು ಇದರ ಅಧ್ಯಕ್ಷ ಮಾಧವ ಕಾಮತ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಉದ್ಯಮಿ ರಾಮಚಂದ್ರ ನಾಯಕ್, ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ, ಬಂಟಕಲ್ಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ, ರಿಕ್ಷಾ ಚಾಲಕ ಮಾಲಕ ಸಂಘದ ಮಂಜುನಾಥ ಪೂಜಾರಿ, ಕಾರು ಚಾಲಕ ಮಾಲಕ ಸಂಘದ ಉಮೇಶ್ ರಾವ್,ಶಿರ್ವ ಗ್ರಾಮ ಪಂಚಾಯತ್ ನ ಗ್ರಂಥಪಾಲಕಿ ಅಮ್ಮಿ, ವಿಶ್ವಕರ್ಮ ಸಂಘದ ಜಗದೀಶ ಆಚಾರ್ಯ,ರಾ.ಸಾ ಯುವ ವೃಂದದ ರಾಘವೇಂದ್ರ ನಾಯಕ್, ಶ್ರೀ ದುರ್ಗಾ ಮಹಿಳಾ ವೃಂದದ ಸರಸ್ವತಿ ಕಾಮತ್, ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೊ, ಮಜೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಧೀರಾಜ್,ಹೇರೂರು ವಿಕಾಸ ಸಮಿತಿಯ ಮಾಧವ ಆಚಾರ್ಯ, ಬಂಟಕಲ್ಲು ಜಾಸ್ಮಿನ್ ಲಯನ್ಸ್ ಕ್ಲಬ್ ನ ಲ. ಪ್ರಮೀಳಾ ಲಸ್ರಾದೊ, ಸುರೇಶ್ ಆಚಾರ್ಯ, ಸಮಿತಿಯ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ಧನ್ಯವಾದವಿತ್ತರು, ವಿರೇಂದ್ರ ಪಾಟ್ಕರ್ ಪ್ರಾರ್ಥಿಸಿದರು , ಶಿಕ್ಷಕಿ ಆರುಂಧತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News