Home ಸುದ್ದಿ ಕುಂದಾಪುರ : ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಮೃತ್ಯು

ಕುಂದಾಪುರ : ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಮೃತ್ಯು

ಕುಂದಾಪುರ : ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಬಂಟ್ಟಾಡಿ ಗ್ರಾಮದಲ್ಲಿ ನಡೆದಿದೆ. ಬಂಟ್ಟಾಡಿ ಗ್ರಾಮದ ನಿವಾಸಿ 49 ವರ್ಷದ ಸೀತಾರಾಂ ಮೃತಪಟ್ಟ ದುರ್ದೈವಿ. ಇವರು ಕುಂದಾಪುರದ ಸೆಂಚುರಿ ನಾನ್ ವೆಜ್ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದು ಔಷಧಿ ತೆಗೆದುಕೊಳ್ಳುತ್ತಿದ್ದರು. ಇವರಿಗೆ ಸೆ. 23 ರಂದು ಮಧ್ಯಾಹ್ನ ವೇಳೆ ಹೋಟೆಲ್ನಲ್ಲಿ ಜೋರಾಗಿ ದಮ್ಮು ಬಂದಿದ್ದು ಹೋಟೆಲ್ ಮಾಲೀಕರು ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಇವರು ಮೃತಪಟ್ಟಿದ್ದು ಈ ಬಗ್ಗೆ ಕುಂದಾಪುರ ಪೋಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾಗಿದೆ.

Translate »

You cannot copy content from Baravanige News