Saturday, July 27, 2024
Homeಸುದ್ದಿಕರಾವಳಿಮಂಗಳೂರು ಕುಕ್ಕರ್ ಸ್ಪೋಟದ ರೂವಾರಿ ಅರಾಫತ್ ಅಲಿ ಅರೆಸ್ಟ್

ಮಂಗಳೂರು ಕುಕ್ಕರ್ ಸ್ಪೋಟದ ರೂವಾರಿ ಅರಾಫತ್ ಅಲಿ ಅರೆಸ್ಟ್

ನವದೆಹಲಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಐಸಿಸ್ ಉಗ್ರ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.

ನೈರೋಬಿಯಾದಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಾಗ ಎನ್ಐಎ ಬಲೆಗೆ ಬಿದ್ದಿದ್ದಾನೆ.

ಈತ ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ, ಮಂಗಳೂರು ಕುಕ್ಕರ್ ಬಂದ್ ಸ್ಪೋಟದ , ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಪೋತ ನಡೆಸುವ ಸಲುವಾಗಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದ ಮೊಹಮ್ಮದ್ ಶಾರೀಖ್ ಜತೆಯೂ ಸಂಪರ್ಕದಲ್ಲಿದ್ದ ಎಂದು ಎನ್ಐಎ ತಿಳಿಸಿದೆ.

2020ರಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ಅರಾಫತ್ ಅಲಿ ದೇಶ ಬಿಟ್ಟು ಹೋಗಿದ್ದನು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News