Friday, March 29, 2024
Homeಸುದ್ದಿಕುವೈತ್‌ನಲ್ಲಿ ಅಪಘಾತ - ಮಂಗಳೂರು ಮೂಲದ ಯುವಕ ಮೃತ್ಯು 

ಕುವೈತ್‌ನಲ್ಲಿ ಅಪಘಾತ – ಮಂಗಳೂರು ಮೂಲದ ಯುವಕ ಮೃತ್ಯು 

ಮಂಗಳೂರು : ಕುವೈತ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಬಜಾಲ್‌ ಪಕ್ಕಲಡ್ಕದ ಯುವಕನೊಬ್ಬನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಜಾಲ್‌ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ (33) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಕುವೈತ್‌ನ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್‌ ಆಗಿದ್ದ ಅವರು ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬೈಕ್‌ನಲ್ಲಿ ಮರಳುವ ವೇಳೆ ಕಾರು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.ಇನ್ನು ಮೃತ ಆಸಿಫ್ ಅವರು ಪತ್ನಿ ಮತ್ತು ತಾಯಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News