Wednesday, May 22, 2024
Homeಸುದ್ದಿಬಿರಿಯಾನಿಗಾಗಿ ಮೊಸರು ಕೇಳಿದ್ದೇ ತಪ್ಪಾ..!??; ಅಷ್ಟಕ್ಕೇ ಕೊಂದೇ ಬಿಟ್ಟ ಹೊಟೇಲ್ ಮಾಲೀಕ

ಬಿರಿಯಾನಿಗಾಗಿ ಮೊಸರು ಕೇಳಿದ್ದೇ ತಪ್ಪಾ..!??; ಅಷ್ಟಕ್ಕೇ ಕೊಂದೇ ಬಿಟ್ಟ ಹೊಟೇಲ್ ಮಾಲೀಕ

ಬಿರಿಯಾನಿ ಸವಿಯಲು ಮೊಸರು ಬೇಕೆ ಬೇಕು. ಆದರೆ ಇಲ್ಲೊಬ್ಬ ಗ್ರಾಹಕ ಹೆಚ್ಚುವರಿ ಮೊಸರು ಕೊಡಿ ಎಂದು ಕೇಳಿದ್ದಕ್ಕೆ ಆತನನ್ನೇ ರೆಸ್ಟೋರೆಂಟ್​​ ಸಿಬ್ಬಂದಿ ಮತ್ತು ಮಾಲೀಕ ಸೇರಿ ಥಳಿಸಿ ಕೊಂದ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಅಲ್ಲಿನ ಪಂಜಾಗುಟ್ಟದ ಮೆರಿಡಿಯನ್ ರೆಸ್ಟೋರೆಂಟ್​​ನಲ್ಲಿ ಈ ದುರಂತ ಸಂಭವಿಸಿದೆ. ಲಿಯಾಕತ್​ ಎಂಬ ಗ್ರಾಹಕ ಮಧ್ಯಾಹ್ನದ ವೇಳೆ ಊಟಕ್ಕೆಂದು ಹೋಟೆಲ್​ಗೆ ಬಂದಾಗ ಮೊದಲಿಗೆ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಹಿಗ್ಗಾಮುಗ್ಗಾ ಥಳಿಸಿ ಬಿಟ್ಟಿದ್ದಾರೆ. ಈ ವೇಳೆ ವ್ಯಕ್ತಿ ಕುಸಿದು ಬಿದ್ದಿದ್ದಾನೆ.

ಇನ್ನು ಘಟನೆ ವೇಳೆ ಮಧ್ಯೆ ಪ್ರವೇಶಿಸಿ ಪೊಲೀಸರು ಕುಸಿದು ಬಿದ್ದ ವ್ಯಕ್ತಿಯನ್ನ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಸದ್ಯ ಮೃತನ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News